ಕರ್ನಾಟಕದಲ್ಲಿರೋದು 10 ಪರ್ಸೆಂಟ್​ ಸರ್ಕಾರ- ಮೋದಿ ಈ ಹೇಳಿಕೆಗೆ ಕಾರಣವಾದ ಹಗರಣ ಯಾವುದು ಗೊತ್ತಾ?

10% CommissionWar: DV Sadananda Gowda & CT Ravi Reacts on Modi's Statement.
10% CommissionWar: DV Sadananda Gowda & CT Ravi Reacts on Modi's Statement.

ನಿನ್ನೆ ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್​ ನೇತೃತ್ವದ ಸರ್ಕಾರದ ಮರ್ಯಾದೆಯನ್ನು ದೇಶ ಮಟ್ಟದಲ್ಲಿ ಹರಾಜಿಗೆ ಹಾಕಿದ್ದು, ಪ್ರಧಾನಿ ಕೈಯಲ್ಲಿ ಕಾಂಗ್ರೆಸ್​ ಸರ್ಕಾರ ಕಮೀಷನ್ ಸರ್ಕಾರ ಎನ್ನಿಸಿಕೊಂಡಿದ್ದು ನಿಜಕ್ಕೂ ಅವಮಾನಕರ.

ಇಷ್ಟಕ್ಕೂ ಕಾಂಗ್ರೆಸ್ ಸರ್ಕಾರದ ಮಾನ ಹರಾಜಾಕಿದ ಎರಡು ಹಗರಣಗಳು ಯಾವುದು? ಇಲ್ಲಿದೆ ನೋಡಿ ಡಿಟೇಲ್ಸ್​​.
ಪರಿವರ್ತನಾ ರ್ಯಾಲಿಯಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರ ಎದುರು ಪ್ರಧಾನಿ ಮೋದಿ ಕರ್ನಾಟಕದಲ್ಲಿ ಪರ್ಸೆಂಟೆಜ್​ ರಾಜ್ಯಸರ್ಕಾರವಿದೆ ಎಂದಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ, 250 ಕೋಟಿ ರೂ. ಹಗರಣ ಪ್ರಸ್ತಾಪಿಸಿದ್ದು, ಈ ಬಗ್ಗೆ ಈ ಹಿಂದೆಯೇ ಬಿಟಿವಿನ್ಯೂಸ್​ ಸುದ್ದಿ ಪ್ರಸಾರ ಮಾಡಿತ್ತು. ಇತ್ತೀಚೆಗಷ್ಟೇ PWD ಇಲಾಖೆಯಲ್ಲಿ 250 ಕೋಟಿ ರೂ ಟೆಂಡರ್​ ಕರೆದು 10 ಪರ್ಸೆಂಟ್​ ಕಮಿಷನ್​ ಪಡೆದು ಕಾಮಗಾರಿ ನೀಡಲಾಗಿತ್ತು.

 

 

ಸ್ಲಂಬೋರ್ಡ್​ನಲ್ಲಿ 50 ಸಾವಿರ ಮನೆ ಕಟ್ಟಲು ಕರೆದಿದ್ದ 2500 ಕೋಟಿ ಟೆಂಡರ್​ ನಲ್ಲಿ ಸ್ಲಂಬೋರ್ಡ್​ ಎಂಜಿನಿಯರ್​​ ಬಾಲರಾಜು, ಕಮಿಷನರ್​​ ಭೀಮಯ್ಯ ಸೇರಿ ಅಕ್ರಮ ಎಸಗಿದ್ದರು. ನಕಲಿ ಕಂಟ್ರ್ಯಾಕ್ಟರ್​ಗಳಿಂದ 10 ಪರ್ಸೆಂಟ್​ ಕಮಿಷನ್​ ಪಡೆದು ಟೆಂಡರ್​ ನೀಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿ ಕರೆದು ವಾಗ್ದಾಳಿ ನಡೆಸಿದ್ದ ಬಿಜೆಪಿ ಮುಖಂಡರು. ಈ ಬಗ್ಗೆ ಮೊದಲ ಬಾರಿಗೆ ಬಿಟಿವಿ ನ್ಯೂಸ್​​ ವರದಿ ಪ್ರಸಾರ ಮಾಡಿತ್ತು. ಇದೀಗ ಪ್ರಧಾನಿ ಕೂಡ ತಮ್ಮ ಭಾಷಣದಲ್ಲಿ ಈ ಅಂಶ ಪ್ರಸ್ತಾಪಿಸಿದ್ದು, ಕರ್ನಾಟಕದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾದಂತಾಗಿದೆ. ಇದಕ್ಕೆ ಕಾಂಗ್ರೆಸ್​ ಏನು ಉತ್ತರ ನೀಡುತ್ತೆ ಕಾದುನೋಡಬೇಕಿದೆ.