ಬಳ್ಳಾರಿ ಆಟೋ ಚಾಲಕರಿಗೆ ಆನಂದ ಲಕ್ಷ್ಮಿ !! ಗಣಿ ನಾಡಲ್ಲಿ ಶುರುವಾಯ್ತು ಚುನಾವಣಾ ಕಾಂಚಣ ಸದ್ದು !!

2018 Assembly Election: Hospet MLA Anand Gave Auto's to People for Publicity.
2018 Assembly Election: Hospet MLA Anand Gave Auto's to People for Publicity.

2018ರ ವಿಧಾನಸಭೆ ಎಲೆಕ್ಷನ್​​ಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗ್ಲೇ ಒಬ್ಬೊಬ್ಬರು ಒಂದೊಂದು ಪ್ರಚಾರದ ಗಿಮಿಕ್​​ ಮಾಡ್ತಿದ್ದಾರೆ. ಈ ಸಾಲಿಗೆ ಗಣಿ ನಾಡು ಬಳ್ಳಾರಿ ಕೂಡ ಸೇರ್ಪಡೆಯಾಗಿದ್ದು, ಗಣಿದಣಿಗಳ ನಾಡಿನಲ್ಲಿ ‘ಆನಂದಲಕ್ಷ್ಮೀ ಲಕ್ಕಿ ಡಿಪ್‌’ ಸದ್ದು ಮಾಡುತ್ತಿದೆ. ಹೌದು ಹೊಸಪೇಟೆ ಶಾಸಕ ಆನಂದ್ ಸಿಂಗ್ ಚುನಾವಣೆಗಾಗಿ ವಿಭಿನ್ನ ಪ್ರಯತ್ನ ನಡೆಸಿದ್ದು, ಚಾಲಕರಿಗೆ ಉಚಿತ ಅಟೋ ವಿತರಿಸಿ ಮತಬೇಟೆಗೆ ಮುಂಧಾಗಿದ್ದಾರೆ.

 

2018 Assembly Election: Hospet MLA Anand Gave Auto's to People for Publicity.
2018 Assembly Election: Hospet MLA Anand Gave Auto’s to People for Publicity.

ಆನಂದಲಕ್ಷ್ಮೀ ಲಕ್ಕಿ ಡಿಪ್​ ಯೋಜನೆಯಡಿ ಅಟೋಗಳು ಆನಂದ ಸಿಂಗ್​ ಪರ ಪ್ರಚಾರ ಮಾಡಬೇಕು. ಪ್ರಚಾರ ಮಾಡಲು ಬಯಸುವ ಅಟೋ ಚಾಲಕರು ಎರಡೂ ಬದಿಯಲ್ಲಿ ಬಿಜೆಪಿ ಚಿಹ್ನೆ, ಹಿಂಭಾಗದಲ್ಲಿ ರುಮಾಲು ಧರಿಸಿರುವ ಶಾಸಕರ ಭಾವಚಿತ್ರ ಹಾಗೂ ‘ಆನಂದ್‌ ಸಿಂಗ್‌ ಅವರ ನಡಿಗೆ, ವಿಜಯನಗರ ಕ್ಷೇತ್ರದ ಅಭಿವೃದ್ಧಿ ಕಡೆಗೆ’, ‘ಕ್ಷೇತ್ರದ ಅಭಿವೃದ್ಧಿಗಾಗಿ ಹರಸಿ, ಆಶೀರ್ವದಿಸಿ’ ಎಂಬ ಬರಹ ಹೊಂದಿರಬೇಕು.


ಹೀಗೆ ಆನಂದ ಸಿಂಗ್ ಪರ ಪ್ರಚಾರ ಮಾಡುವ ಅಟೋಗಳು ಆನಂದ ಸಿಂಗ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಬಳಿಕ ಈ ನೋಂದಾಯಿತ ವಾಹನಗಳ ಸಂಖ್ಯೆಯ ಚೀಟಿಯನ್ನು ಒಂದೆಡೆ ಕೆಲಹಾಕಿ ಕೊನೆಗೆ ಲಕ್ಕಿ ಡ್ರಾ ಮೂಲಕ ಒಂಬತ್ತು ಚೀಟಿ ಎತ್ತಲಾಗುತ್ತದೆ. ಅದರಲ್ಲಿ ಆಯ್ಕೆಯಾಗುವ 9 ಚೀಟಿಯ ಮಾಲೀಕರಿಗೆ ಉಚಿತವಾಗಿ ಅಟೋ ನೀಡಲು ಆನಂದ ಸಿಂಗ್ ನಿರ್ಧರಿಸಿದ್ದಾರೆ.
ಇನ್ನು ಆನಂದ ಸಿಂಗ್ ಈ ಪ್ರಯತ್ನಕ್ಕೆ ಸಖತ್ ರೆಸ್ಪಾನ್ಸ್​ ಸಿಕ್ಕಿದ್ದು, ಈವರೆಗೆ 892 ಆಟೊ ಚಾಲಕರು ಹೆಸರು ನೋಂದಾಯಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಮುನ್ನವೇ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವ ರೀತಿಯಲ್ಲಿ ಆನಂದ ಸಿಂಗ್ ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದು, ಉಚಿತ ಅಟೋ ಪ್ಲಾನ್​ ಮತ ತಂದುಕೊಡುತ್ತಾ ಕಾದುನೋಡಬೇಕಿದೆ.

 

Watch Here: https://youtu.be/ZFODJICZehE