ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಮದ್ಯೆ ಕುರುಕ್ಷೇತ್ರ !! ಮುನಿಸಿಗೆ ಕಾರಣರಾದ್ರು ಮುನಿರತ್ನ !!

ಯುವ ದಳಪತಿಗಳಾದ ಪ್ರಜ್ವಲ್ ರೇವಣ್ಣ‌ ಮತ್ತು ನಿಖಿಲ್ ಮಧ್ಯೆ ಭಿನ್ನಮತ ಭುಗಿಲೆದ್ದಿದೆ. ಭಿನ್ನಮತಕ್ಕೆ ಕಾರಣವಾಗಿರೋದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಮತ್ತು ಅಲ್ಲಿನ ಕಾಂಗ್ರೆಸ್ ಶಾಸಕರು !

ಹೌದು. ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಮದ್ಯೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಜಗಳ ತಂದಿಟ್ಟಿದೆ. ಹಾಗಂತ ಇಬ್ಬರೂ ಒಂದೇ ಕ್ಷೇತ್ರದ ಆಕಾಂಕ್ಷಿಗಳು ಎಂದಲ್ಲ. ಜೆಡಿಎಸ್ ಯುವ ದಳಪತಿಗಳ ಭಿನ್ನಮತಕ್ಕೆ ಕಾರಣವಾಗಿರೋದು ಶಾಸಕ, ನಿರ್ಮಾಪಕ ಮುನಿರತ್ನ.

ಪ್ರಜ್ವಲ್ ರೇವಣ್ಣ ಹುಣಸೂರ್ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿದ್ದರು. ಯಾವಾಗ ಹುಣಸೂರಿಗೆ ಎಚ್ ವಿಶ್ವನಾಥ್ ಬಂದರೋ ಪ್ರಜ್ವಲ್ ಕಣ್ಣು ರಾಜರಾಜೇಶ್ವರಿ ನಗರದ ಕಡೆ ಹರಿಯಿತು. ಜೆಡಿಎಸ್ ವರಿಷ್ಠರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ ಪ್ರಜ್ವಲ್, ರಾಜರಾಜೇಶ್ವರಿ ನಗರದಲ್ಲಿ ಕಾರ್ಯಕರ್ತರ ಸಭೆಗಳನ್ನೂ ಪ್ರಾರಂಭ ಮಾಡಿದ್ದಾರೆ. ಇದು ನಿಖಿಲ್ ಕುಮಾರಸ್ವಾಮಿ ಅಸಮಾದಾನಕ್ಕೆ ಕಾರಣವಾಗಿದೆ.

ನಿಖಿಲ್ ಕುಮಾರಸ್ವಾಮಿ ಕುರುಕ್ಷೇತ್ರ ಸಿನೇಮಾದಲ್ಲಿ ನಟಿಸುತ್ತಿದ್ದು, ಅದರ ಯಶಸ್ಸಿನ ಮೇಲೆ ಅವರ ರಾಜಕೀಯ ಜೀವನ ನಿಂತಿದೆ. ಇಂತಹ ಕುರುಕ್ಷೇತ್ರ ಸಿನೇಮಾಕ್ಕೆ ದುಡ್ಡು ಹಾಕಿರೋದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ. ತನ್ನ ಭವಿಷ್ಯ ರೂಪಿಸುವ ಕಾಂಗ್ರೆಸ್ ಶಾಸಕನ ಕ್ಷೇತ್ರದಲ್ಲಿ ಸ್ಪರ್ಧಿಸಬಾರದು ಎಂದು ಪ್ರಜ್ವಲ್ ಗೆ ನಿಖಿಲ್ ಮನವಿ ಮಾಡಿದ್ದಾರೆ. ನಿಖಿಲ್ ಮನವಿಯನ್ನು ಸಾರಾಸಗಾಟಾಗಿ ತಿರಸ್ಕರಿಸಿರೋ ಪ್ರಜ್ವಲ್ ರಾಜರಾಜೇಶ್ವರಿ ನಗರವನ್ನು ಬಿಟ್ಟುಕೊಡಲು ಸಿದ್ದರಿಲ್ಲ. ಈ ಮುನಿರತ್ನ ಕ್ಷೇತ್ರ ನಿಖಿಲ್ ಮತ್ತು ಪ್ರಜ್ವಲ್ ಬಾಳಲ್ಲಿ ಕುರುಕ್ಷೇತ್ರವಾಗಿ ಮಾರ್ಪಾಟಾಗಿದೆ.