ಸರಕಾರಿ ನೌಕರರಿಗೆ ಸಿಎಂ ಸಿದ್ದು ಬಂಪರ್ ಕೊಡುಗೆ !! ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ರಾಜ್ಯ ಸರಕಾರ ನಿರ್ಧಾರ !! ಕೈತುಂಬ ಸಂಬಳದ ಜೊತೆ ವಾರಕ್ಕೆ ಐದೇ ದಿನ ಕೆಲಸ !!

2018 -Master Plan: CM Siddaramaiah's Gift to government employees.
2018 -Master Plan: CM Siddaramaiah's Gift to government employees.

2018ರ ಎಲೆಕ್ಷನ್ ಮತ ಬೇಟೆಗೆ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಮತ ಬುಟ್ಟಿಗೆ ಕೈಹಾಕಿದ ಸಿದ್ದರಾಮಯ್ಯ, ಅವರಿಗಾಗಿ ಬಂಪರ್ ಉಡುಗೊರೆ ನೀಡುವ ಮೂಲಕ 6 ಲಕ್ಷ ಕುಟುಂಬದ ಲಕ್ಷಾಂತರ ಮತ ಸೆಳೆಯಲು ತಯಾರಿ ನಡೆಸಿದ್ದಾರೆ.

ಆರನೇ ವೇತನ ಆಯೋಗ ನೀಡಲಿರೋ ವರದಿ ಯಥಾವತ್ತು ಜಾರಿಗೆ ರಾಜ್ಯಸರಕಾರ ಸಿದ್ಧತೆ ನಡೆಸಿದ್ದು, ಜನವರಿ ಅಂತ್ಯಕ್ಕೆ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಆಯೋಗದ ವರದಿ ಸಲ್ಲಿಸಲಿದೆ. 6ನೇ ವೇತನ ಆಯೋಗದ ಈ ವರದಿ ಜಾರಿಗೆ ತಂದು ಎಲೆಕ್ಷನ್ಗೆ ಹೋಗಲು ಸಿಎಂ ತೀರ್ಮಾನ ಮಾಡಿದ್ದಾರೆ. ಮುಂದಿನ ಮಾರ್ಚ್ ನಲ್ಲಿ ಮಂಡಿಸಲಿರೋ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಆರನೇ ವೇತನ ಆಯೋಗದ ಜಾರಿ ಬಗ್ಗೆ ಉಲ್ಲೇಖ ಮಾಡಲಿದ್ದಾರೆ. ಈಗಾಗಲೇ ಹಲವು ಕಾರಣಗಳಿಂದ ರಾಜ್ಯ ಸರಕಾರಿ ನೌಕರರ ಅಸಮಾದಾನಕ್ಕೆ ಗುರಿಯಾಗಿರುವ ರಾಜ್ಯ ಕಾಂಗ್ರೆಸ್ ಸರಕಾರ, ಆರನೇ ವೇತನ ಆಯೋಗದ ಜಾರಿ ಮೂಲಕ ಸರಕಾರಿ ನೌಕರರ ಮನವೊಲಿಸಲು ಮುಂದಾಗಿದೆ.

 

 

ಈ ವರದಿಯೇನಾದರೂ ಜಾರಿಯಾದ್ರೆ ಸರಕಾರಿ ನೌಕರರಿಗೆ ಬಂಪರ್ ಲಾಭವಾಗಲಿದೆ.ಹಾಗಾದರೆ ವರದಿಯಲ್ಲಿ ಏನೇನಿದೆ ನೋಡೋಣಾ. ವಾರದಲ್ಲಿ 5 ದಿನ ಮಾತ್ರ ಕೆಲಸ, ಶನಿವಾರ, ಭಾನುವಾರ ರಜೆ. ಕೆಲ ಜಯಂತಿಗಳಿಗೆ ರಜೆ ರದ್ದು , ಕೆಲಸದ ಸಮಯದಲ್ಲಿ ಬದಲಾವಣೆ, ನೌಕರರ ವೇತನದಲ್ಲಿ ಭಾರಿ ಹೆಚ್ಚಳ, ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳ, ಕನಿಷ್ಠ ವೇತನ ಮೊತ್ತ 16,350 ರೂ.ಗೆ ಏರಿಕೆ, ಗರಿಷ್ಠ ವೇತನ 1,32,925 ರೂ.ಗೆ ಏರಿಕೆ. ಗ್ರೂಪ್ ಡಿ ಗೆ 16,350 ರೂ., ಗ್ರೂಪ್ ಸಿ 19,850, ಎಫ್ಡಿಎ 28,125 ರೂ. ಗ್ರೂಪ್ ಬಿ 39,425 ರೂ., ಗ್ರೂಪ್ ಎ 48,625 ರೂ. ಐಎಎಸ್ಯೇತರ ಅಧಿಕಾರಿ-95,325 ರೂಪಾಯಿಯನ್ನು ನಿಗಧಿಗೊಳಿಸಿ ವರದಿ ಸಿದ್ದಪಡಿಸಲಾಗಿದೆ.