ಖ್ಯಾತ ನಟಿ ಪ್ರಿಯಮಣಿ ರಾಜಕೀಯಕ್ಕೆ !! ಯಾವ ಪಕ್ಷ ? ಯಾವ ಕ್ಷೇತ್ರ ?

Actress Priyamani entry to Politics.
Actress Priyamani entry to Politics.

ಕರ್ನಾಟಕದಲ್ಲಿ ಚುನಾವಣೆಗೆ ದಿನಗಣನೆ ನಡೆದಿದೆ. ಹೀಗಾಗಿ ರಾಜಕೀಯ ಕಣ ರಂಗೇರುತ್ತಿದೆ.

ad

 

ಈಗಾಗಲೇ ಸ್ಯಾಂಡಲವುಡ್​​ನ ಹಲವಾರು ನಟ-ನಟಿಯರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪ್ರಶ್ನೆಗೆ ಮುಂದಾಗಿದ್ದಾರೆ. ಹೀಗಿರುವಾಗಲೇ ಎಲ್ಲೆಡೆ ಪ್ರಿಯಾಮಣಿ ಕಟೌಟ್ಸ್​ ರಾರಾಜಿಸುತ್ತಿದ್ದು, ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದು, ಅವರ ಪತಿಯೇ ಪ್ರಚಾರಕ್ಕಿಳಿದಿದ್ದಾರೆ.
ಇದ್ಯಾವುದು ಜನಶಕ್ತಿ ಪಕ್ಷ? ಎಲ್ಲಿಂದ ಪ್ರಿಯಾಮಣಿ ಕಣಕ್ಕಿಳಿತಾರೇ ಅಂತ ಯೋಚಿಸ್ತಿದ್ದೀರಾ? ಇದು ರೀಲ್​ ಸ್ವಾಮಿ.

ಹೌದು. ಪ್ರಿಯಾಮಣಿ ಹೊಸ ಚಿತ್ರವೊಂದಕ್ಕಾಗಿ ಬಣ್ಣ ಹಚ್ಚಿದ್ದು, ಆ ಚಿತ್ರದಲ್ಲಿ ರಾಜಕೀಯ ಪ್ರವೇಶಿಸುವ ಸನ್ನಿವೇಶ ಇದೆ. ಇದಕ್ಕಾಗಿ ಈಗಾಗಲೇ ಪ್ರಿಯಾಮಣಿ ಕಟೌಟ್​​ ಎಲ್ಲೆಡೆ ರಾರಾಜಿಸುತ್ತಿದೆ.

 

ಮದುವೆ ಬಳಿಕ ಪ್ರಿಯಾಮಣಿ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕಾಗಿ ಬಣ್ಣ ಹಚ್ಚಿದ್ದು, ಆ ಚಿತ್ರದ ಹೆಸರು ಧ್ವಜ. ರಾಜಕೀಯ ಕಥಾಹಂದರವೊಂದನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರಿಯಾಮಣಿ ರಾಜಕೀಯ ಪ್ರವೇಶಿಸುವ ಸನ್ನಿವೇಶವಿದೆ. ಅಶೋಕ್ ಕಶ್ಯಪ್​ ನಿರ್ದೇಶನದ ಈ ಚಿತ್ರದಲ್ಲಿ ರವಿ ಎಂಬ ಹೊಸ ಪ್ರತಿಭೆ ಪ್ರಿಯಾಮಣಿ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿವ್ಯ,ಟಿ.ಎನ್​.ಸೀತಾರಾಂ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಕಬಾಲಿ ಸಂಗೀತ ನಿರ್ದೇಶಕ ಸಂತೋಷ ನಾರಾಯಣ್ ಸಂಗೀತವಿದ್ದು, ಈಗಾಗಲೇ ಚಿತ್ರತಂಡ ರಿಲೀಸ್​​​ ಗೆ ತಯಾರಿ ನಡೆಸಿದೆ. ಒಟ್ಟಿನಲ್ಲಿ ಚುನಾವಣೆ ಬರುತ್ತಿದ್ದಂತೆ ಹೊರಬಂದ ಪ್ರಿಯಾಮಣಿ ಕಟೌಟ್​ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದಂತು ಸತ್ಯ.