ಪ್ರೇಮಿಗಳ ದಿನಕ್ಕೆ ಗುಡ್ ನ್ಯೂಸ್ ನೀಡಲಿದ್ದಾರೆ ಮೋಹಕ ತಾರೆ ರಮ್ಯಾ !! ಫೆಬ್ರವರಿ 14 ರಿಂದ ಕಾಂಗ್ರೆಸ್ಸಿಗರಿಗೆ ರಮ್ಯ ಚೈತ್ರ ಕಾಲ !!

Actress Ramya February 14th begun the election campaign From Mandya.
Actress Ramya February 14th begun the election campaign From Mandya.election campaign From Mandya.

ಫೆಬ್ರವರಿ 14 ಎಂಬುದು ಕಾಂಗ್ರೆಸ್ಸಿಗರ ಪಾಲಿಗೆ ರಮ್ಯ ಚೈತ್ರ ಕಾಲವಾಗಲಿದೆ. ಮೋಹಕ ತಾರೆ ರಮ್ಯಾ ಫೆಬ್ರವರಿ 14 ರಂದು ರಾಜ್ಯ ಕಾಂಗ್ರೆಸ್ಸಿಗರಿಗೆ ಗುಡ್ ನ್ಯೂಸ್ ನೀಡಲಿದ್ದಾರೆ. ಹೌದು

ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ಸಿಗೆ ತಾರಾ ವರ್ಚಸ್ಸು ಬರಲಿದೆ.ಮತ್ತೆ ರಾಜ್ಯ ರಾಜಕೀಯ ಆಖಾಡಕ್ಕಿಳಿಯಲಿರೋ ರಮ್ಯಾ 2ನೇ ಇನ್ನೀಂಗ್ಸ್ ಆರಂಭಿಸಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮೋದಿ, ಶಾಗೆ ತಿರುಗೇಟು ಕೊಡ್ತಾ ಇದ್ದ ರಮ್ಯಾ ಫೆಬ್ರವರಿ 14 ರಿಂದ ಫೀಲ್ಡಿನಲ್ಲಿರಲಿದ್ದಾರೆ. ಪ್ರೇಮಿಗಳ ದಿನವೇ ಅಖಾಡಕ್ಕೀಳಿಯಲಿರೋ ಸ್ಯಾಂಡಲ್ವುಡ್ ಕ್ವೀನ್, ಎಲೆಕ್ಷನ್ ಅಖಾಡಕ್ಕೆ ಮೆರಗು ನೀಡಲಿದ್ದಾರೆ. ಮಂಡ್ಯದಿಂದಲೇ ನಟಿ ರಮ್ಯ ಚುನಾವಣಾ ಪ್ರಚಾರ ಆರಂಭವಾಗಲಿದೆ. ಸ್ಟಾರ್ ಕ್ಯಾಂಪೈನರ್ ಆಗಿ ರಾಜ್ಯದಿಂದ ರಮ್ಯ ಪ್ರಚಾರ ಶುರು ಮಾಡಲಿದ್ದಾರೆ.

 

 

 

ಫೆಬ್ರವರಿ 14ರಿಂದ ರಮ್ಯ ರಾಜ್ಯದಲ್ಲೆ ವಾಸ್ತವ್ಯ ಹೂಡಲಿದ್ದಾರೆ. ನೇರವಾಗಿ ಎಐಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ರಮ್ಯ ರಾಜ್ಯಕ್ಕೆ ಆಗಮಿಸುತ್ತಿದ್ದು, ನಟಿ ರಮ್ಯಗೆ ಸ್ಯಾಂಡಲ್ವುಡ್ ದಂಡೇ ಸಾಥ್ ನೀಡಲಿದೆ.ಮಂಡ್ಯದಲ್ಲಿ ರಮ್ಯಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪೇನ್. ಬೆಂಗಳೂರಲ್ಲಿ ನಟ ಸುದೀಪ್ ಜೊತೆ ರಮ್ಯ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಟಿ ಮಾಲಾಶ್ರೀ, ಕಾಮಿಡಿ ಕಿಂಗ್ ಸಾಧು ಕೋಕಿಲ ಸಾಥ್ ನೀಡಲಿದ್ದಾರೆ. ಕರಾವಳಿ ಪ್ರದೇಶದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ರಮ್ಯ ಕಾಂಪೇನ್ ಮಾಡಲಿದ್ದಾರೆ. ಚುನಾವಣಾ ಪ್ರಚಾರವನ್ನು ಕಲರ್ಫುಲ್ ಮಾಡಲು ಕಾಂಗ್ರೆಸ್ ಈ ಮಾಸ್ಟರ್ ಪ್ಲಾನ್ ರೂಪಿಸಿದ್ದು ರಮ್ಯಾ ಅದರ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ.