2018 ಕ್ಕೆ ರಮ್ಯಾ ಶಾಸಕಿ ? ಮಂಡ್ಯದಲ್ಲಿ ಚುನಾವಣೆ ನಿಲ್ಲಲಿದ್ದಾರೆ ಮೋಹಕ ತಾರೆ !!

 

ad


ಚಿತ್ರ ನಟಿ ರಮ್ಯಾ ರಾಷ್ಟ್ರ ರಾಜಕಾರಣದಿಂದ ರಾಜ್ಯ ಕಾಜಕಾರಣಕ್ಕೆ ಮರಳುವುದು ಖಚಿತವಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸಲಿದ್ದು, ಟಿಕೆಟ್ ಕನ್ಫರ್ಮ್ ಆಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮಂಡ್ಯದಿಂದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆಯಾದ ಚಿತ್ರ ನಟಿ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ರಮ್ಯಾರನ್ನು ಕಾಂಗ್ರೆಸ್ ಹೈಕಮಾಂಡ್ ಕೈಬಿಟ್ಟಿರಲಿಲ್ಲ. ರಮ್ಯಾರನ್ನು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯನ್ನಾಗಿ ನೇಮಿಸಲಾಗಿತ್ತು. ರಮ್ಯಾ ತನಗೆ ನೀಡಿದ್ದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದರು. ರಮ್ಯಾರವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ದ ಮಾಡಿದ್ದ ಟೀಕೆಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು.

ರಾಷ್ಟ್ರರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ರಾಜ್ಯ ರಾಜಕಾರಣಕ್ಕೆ ಬರುವ ಸೂಚನೆಗಳು ಎರಡು ತಿಂಗಳ ಹಿಂದೆಯೇ ಲಭ್ಯವಾಗಿತ್ತು. ಕೆಪಿಸಿಸಿ ಕಾರ್ಯಕಾರಿ ಸಮಿತಿಯ ಪುನರ್ ರಚನೆಯ ವೇಳೆ ಸಮಿತಿಯ ಪಟ್ಟಿಯಲ್ಲಿ ರಮ್ಯಾ ಹೆಸರು ಇತ್ತು. ಸದ್ಯ ಕಾಂಗ್ರೆಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿರುವ ರಮ್ಯಾಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಇದೀಗ ಕನ್ಫರ್ಮ್ ಆಗಿದೆ. ಜೆಡಿಎಸ್ ಪ್ರಭಾವ ಹೊಂದಿರುವ ಮಂಡ್ಯದಲ್ಲಿ ರಮ್ಯಾಗೆ ಟಿಕೆಟ್ ಕೊಡುವ ಮೂಲಕ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ತಂತ್ರಗಾರಿಕೆ ಮಾಡಿದೆ. ಅಂಬರೀಷ್ ರನ್ನು ಸ್ಟಾರ್ ಪ್ರಚಾರಕರನ್ನಾಗಿಸಿ ಭವಿಷ್ಯದಲ್ಲಿ ಹುದ್ದೆ ಕೊಡುವ ಭರವಸೆ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ 2018 ರಲ್ಲಿ ರಮ್ಯಾ ವಿಧಾನಸಭೆ ರಮ್ಯಾ ಪ್ರವೇಶ ಮಾಡಲಿದ್ದಾರೆ.1 ಕಾಮೆಂಟ್

Comments are closed.