ರಮ್ಯಾ ಬೆನ್ನಲ್ಲೇ ಫೀಲ್ಡಿಗಿಳಿದ ಮಂಡ್ಯದ ಗಂಡು ಅಂಬರೀಷ್ !! ಮಂಡ್ಯವೆಂಬ ಇಂಡಿಯಾದಲ್ಲಿ ರಂಗಿನ ರಾಜಕಾರಣ !!

ಸ್ಯಾಂಡಲವುಡ್​ ಕ್ವೀನ್ ಹಾಗೂ ಕಾಂಗ್ರೆಸ್​​​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯ ಮಂಡ್ಯದ ಸಕ್ರಿಯ ರಾಜಕಾರಣಕ್ಕೆ ಮರಳಿದ ಬೆನ್ನಲ್ಲೇ ಮಾಜಿ ಸಚಿವ ಅಂಬರೀಶ್​​ ಕೂಡಾ ಮಂಡ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನಿನ್ನೆ ಸಂಜೆ ವೇಳೆ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ಮನೆಯಲ್ಲಿ ಹಿರಿಯ ಸಂಸದರು ಹಾಗೂ ಹೋರಾಟಗಾರರು ಆಗಿರುವ ಜಿ.ಮಾದೇಗೌಡರ್​ನ್ನು ಭೇಟಿ ಮಾಡಿರುವ ಅಂಬರೀಶ್​ ಸುಧೀರ್ಘ ಅವಧಿಯವರೆಗೂ ಮಾತುಕತೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಅಂಬರೀಶ್​ಗೆ ಟಿಕೇಟ್​ ಕನ್ಪರ್ಮ್ ಮಾಡಿರುವ ಹಿನ್ನೆಲೆಯಲ್ಲಿ ಅಂಬಿ ಮಾದೇಗೌಡರನ್ನು ಭೇಟಿ ಮಾಡಿದ್ದು, ಚುನಾವಣೆಗೆ ಬೆಂಬಲ ಕೋರಿದ್ದಾರೆ ಎನ್ನಲಾಗಿದೆ. ಇನ್ನು ಮಾದೇಗೌಡರು ಕೂಡ ಅಂಬರೀಶ್​ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಅಂಬರೀಶ್​ ಮತ್ತೆ ಮಂಡ್ಯ ನೆಲದಲ್ಲಿ ಚುನಾವಣೆಗೆ ಸ್ಪರ್ಧಿಸಿ ಅದೃಷ್ಟಪರೀಕ್ಷೆಗೆ ಮುಂಧಾಗೋದು ಖಚಿತವಾದಂತಾಗಿದೆ.

ಕೆಲದಿನಗಳ ಹಿಂದೆಯಷ್ಟೇ ರಮ್ಯ ಮಂಡ್ಯದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯನ್ನು ಬಿಟಿವಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಮಾರನೇ ದಿನವೇ ರಮ್ಯ ಮಂಡ್ಯ ರೀ ಎಂಟ್ರಿ ಖಚಿತವಾಗಿದೆ. ಈಗಾಗಲೇ ಮಂಡ್ಯದ ನೆಹರು ನಗರದಲ್ಲಿ ಬಾಡಿಗೆ ಪಡೆದಿದ್ದ ಮನೆಯನ್ನು ರಮ್ಯ ಖರೀದಿಸಿದ್ದು, ಸಧ್ಯದಲ್ಲೇ ಮಂಡ್ಯದಲ್ಲೇ ವಾಸವಾಗಲಿದ್ದಾರೆ. ಈಗಾಗಲೇ ಮನೆಯ ಇಂಟೀರಿಯರ್​​ ಕೆಲಸ ಆರಂಭಿಸಲಾಗಿದ್ದು, ನವೆಂಬರ್ 29 ರ ತಮ್ಮ ಹುಟ್ಟುಹಬ್ಬದ ದಿನದಂದು ರಮ್ಯ ಮಂಡ್ಯಕ್ಕೆ ಮತ್ತೆ ಪ್ರವೇಶ ಮಾಡುವ ಮುಹೂರ್ತ ನಿಗದಿಯಾಗಿದೆ.

ಹೀಗಿರುವಾಗಲೇ ಅಂಬರೀಶ್​ ಕೂಡ ಮಂಡ್ಯ ರಾಜಕಾರಣಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದು, ತಮ್ಮ ಅವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಮತ ಕೇಳಲು ಅಂಬಿ ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಮಂಡ್ಯ ರಾಜಕಾರಣವೇ ರಾಜ್ಯ ರಾಜಕಾರಣವನ್ನು ಮೀರಿಸುವಷ್ಟು ಕುತೂಹಲ ಮೂಡಿಸಿದೆ.