ಸಿದ್ದರಾಮಯ್ಯ ಸರ್ಕಾರ ಮರ್ಡರ್ ಸರ್ಕಾರ…! ಅನಂತಕುಮಾರ್ ಹೆಗಡೆ ವಾಗ್ದಾಳಿ…..!

Ananth Kumar Hegde Statement against CM Siddaramaiah in Suraksha Yatra.
Ananth Kumar Hegde Statement against CM Siddaramaiah in Suraksha Yatra.

ಕಾರವಾರ : ಸಿದ್ದರಾಮಯ್ಯ ಸರ್ಕಾರ ಮರ್ಡರ್ ಸರ್ಕಾರ. ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗಿನಿಂದ ಈ ನಮ್ಮ ರಾಜ್ಯದಲ್ಲಿ ಕೊಲೆ, ದರೋಡೆಗೆ ಹೆಚ್ಚಾಗತ್ತಾ ಇದೆ.

ಈ ಸರ್ಕಾರದ ವಿರ್ಸಜನಾ ಹೋಮ ಇದೀಗ ಆರಂಭವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿರಿಕಾರಿದ್ರು. ಅವರು ಇಂದು ಉತ್ತರಕನ್ನಡ ಜಿಲ್ಲೆಯಿಂದ ಆರಂಭವಾದ ಜನಸುರಕ್ಷಾ ಯಾತ್ರೆಗೆ ಚಾಲನೆ ನೀಡಿ ಮಾತ್ನಾಟಿದ್ರು. ಸಿದ್ದರಾಮಯ್ಯ ವಿರುದ್ದ ಇರುವ ಕ್ರಿಮೀನಲ್ ಪ್ರಕರಣ ದಾಖಲಿಸಲು ಯಾವ ಹಾರ್ಡ್ ಡಿಸ್ಕ ಸಾಕಾಗೋಲ್ಲ. ಅಷ್ಟೊಂದು ಪ್ರಕರಣ ಕಾಂಗ್ರೆಸ್ ಸರಕಾರ ಬಂದ ಮೇಲೆ ಆಗಿದೆ. ಇದುವರಗೆ ರಾಜ್ಯದಲ್ಲಿ ಸಾಕಷ್ಟು ಪಕ್ಷಗಳು ಅಧಿಕಾರ ನಡೆಸಿಹೋಗಿದೆ ಆದರೆ ಕಾಂಗ್ರೆಸ್ ಸರಕಾರದಲ್ಲಿ ನಡೆದಿರುವಷ್ಟು ದರೋಡೆ, ಕೊಲೆ, ಮನೆ ಕಳ್ಳತನ ಮಿತಿ ಮೀರಿದೆ.

ಕಾಂಗ್ರೆಸ್  ಸರಕಾರದಲ್ಲಿ 23 ಹಿಂದೂ ಯುವಕರ ಕೊಲೆ ಆಗಿದೆ ಇದಕ್ಕೇಲ್ಲಾ ಕಾಂಗ್ರೆಸ್ ಸರಕಾರ ನೇರ ಹೊಣೆ ಎಂದು ಆರೋಪಿಸಿದ ಅನಂತಕುಮಾರ. ಕಿಡ್ನಾಪ್ ಮಾಡೋದು ಈ ಸರಕಾರದ ದೊಡ್ಡ ಸಾಧನೆಯಾಗಿದೆ ಅಂದ್ರು. ಸಿದ್ದರಾಮಯ್ಯ ಸರಕಾರದಲ್ಲಿ ನಾನೇ ಸಚಿವನಾಗಿದ್ದರೆ ಕಲ್ಲು ಕಟ್ಟಿಕೊಟ್ಟು ಸಮುದ್ರಕ್ಕೆ ಹಾರತ್ತಾ ಇದ್ದೆ ಅನಂತಕುಮಾರ ಹೆಗಡೆ.

ಸಿದ್ದರಾಮಯ್ಯ ಅವರಿಗೆ ನಿಮಗೆ ತಾಕ್ಕತ್ತ ಇದ್ದರೆ ನಮ್ಮ ಎದುರಿಗೆ ಬಂದು ಚರ್ಚೆ ಮಾಡಲಿ ಅಂತಾ ಸವಾಲು ಹಾಕಿದ್ರು. ಸಿದ್ದರಾಮಯ್ಯ ಜನತಾದಳದಿಂದ ಕಾಂಗ್ರೆಸ್ಗೆ ಹೊರಬರುವಾಗ ಒಂದು ಪ್ರತಿಜ್ಞೆ ಮಾಡಿ ಬಂದಿದ್ದಾರೆ‌. ನಾನು ಕಾಂಗ್ರೆಸ್ ಗೆ ಹೋಗಿ ಆ ಪಕ್ಷವನ್ನು ಮುಗಿಸಿ ಬರುತ್ತೇನೆ‌ ನೀವು ಚಿಂತೆ ಮಾಡಬೇಡಿ ಅಂತಾ ದೇವೆಗೌಡರಿಗೆ ಮಾತುಕೊಟ್ಟು ಬಂದಿದ್ದಾರೆ ಅಂತಾ ವ್ಯಂಗ್ಯವಾಗಿ ಮಾತ್ನಾಡಿದ್ದರು.