ಬಿಜೆಪಿಯವರು ಜೊಲ್ಲು ಸುರಿಸುವ ನಾಯಿಗಳಿಂದ್ದಂತೆ-ಆನಂದ ಅಸ್ನೋಟಿಕರ್​​!!

ಲೋಕಸಭಾ ಚುನಾವಣೆಯ ಅಂತಿಮ ಘಟ್ಟಕ್ಕೆ ತಲುಪುತ್ತಿದಂತೆ ಪ್ರಚಾರದ ಅಬ್ಬರ ಜೋರಾಗಿದೆ. ಜೆಡಿಎಸ್ ಹಾಗೂ ಬಿಜೆಪಿಗರ ನಡುವೆ ನಡೆಯುತ್ತಿರುವ ವಾಕ್ ಸಮರ. ಒಂದೆಡೆ ತನ್ನ ವಿರುದ್ದ ಟೀಕೆ ಮಾಡಿದ ಬಿಜೆಪಿ ನಾಯಕರಿಗೆ ಜೆಡಿಎಸ್ ಅಭ್ಯರ್ಥಿ ನಾಯಿಗಳೆಂದು ಕಿಡಿಕಾರಿದ್ದರೆ .

ad

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವೆ ಕಾದಾಟ ಜೋರಾಗಿಯೇ ನಡಿತ್ತಿದೆ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್, ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ವಿರುದ್ದ ಬಿರುಸಿನ ಪ್ರಚಾರದಲ್ಲಿ ಒಂದೆಡೆ ತೊಡಗಿದ್ದಾರೆ. ಇನ್ನು ಪ್ರಚಾರದಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ದ ಹೇಳಿಕೆ ನೀಡುತ್ತಾ ಇದ್ದ ಆನಂದ್ ಅಸ್ನೋಟಿಕರ್ ವಿರುದ್ದ ಬಿಜೆಪಿಯ ನಾಯಕರು ವಾಗ್ದಾಳಿ ಸುರುಮಾಡಿದ್ದಾರೆ. ಆನಂದ್ ಅಸ್ನೋಟಿಕರ್ ಮಂತ್ರಿಯಾದ ನಂತರ ಅಕ್ರಮವಾಗಿ ಕೋಟಿಗಟ್ಟಲೇ ಹಣವನ್ನ ಮಾಡಿದ್ದಾರೆ,ಎಂದು ಆನಂದ ವಿರುದ್ಧ ಆರೋಪ ಮಾಡಿದರು.

 

ಇನ್ನು ಬಿಜೆಪಿ ನಾಯಕರ ಆರೋಪಕ್ಕೆ ಆನಂದ್ ಅಸ್ನೋಟಿಕರ್ ಸಹ ಕಿಡಿಕಾರಿದ್ದರು. ಅನಂತ್ ಕುಮಾರ್ ಬೆಂಬಲಿಗ ಬಿಜೆಪಿ ಮರಿ ಪುಡಾರಿ ಹಾಗೂ ಬಿಜೆಪಿ ನಾಯಕರು ನಾಯಿಗಳು ತನ್ನ ವಿರುದ್ದ ಬೊಗಳುತ್ತಿದೆ. ಅವರು ಬೊಗಳುವುದನ್ನ ನಿಲ್ಲಿಸಲಿ, ತಾನು ಆನೆ ಇದ್ದಂತೆ. ಈ ನಾಯಿಗಳು ಬೊಗಳುತ್ತಿದ್ದರೆ ನಾನು ಮುಂದೆ ಸಾಗುತ್ತಲೇ ಇರುತ್ತೇನೆಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ನಾಯಿಗಳಿಗೆ ಹೋಲಿಸಿ ಕಿಡಿಕಾರಿದ್ದಾರೆ.ಇದರಿಂದ ಅಸ್ನೋಟಿಕರ್ ಬಿಜೆಪಿ ನಾಯಕರನ್ನ ನಾಯಿಗಳೆಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದರು.

 

ಆನಂದ್ ಅಸ್ನೋಟಿಕರ್ ಬಿಜೆಪಿ ನಾಯಕರನ್ನ ನಾಯಿಗಳೆಂದು ಹೇಳಿದ್ದಕ್ಕೆ ಬಿಜೆಪಿ ನಾಯಕರು ಅಸ್ನೋಟಿಕರ್ ವಿರುದ್ದ ಕಿಡಿಕಾರಲು ಪ್ರಾರಂಭಿಸಿದ್ದಾರೆ. ತಾವು ನಿಯತ್ತಿನ ನಾಯಿಗಳಿದ್ದಂತೆ, ಬೇರೆ ಪಕ್ಷದ ನಾಯಕರ ಮನೆಯ ಮುಂದೆ ಜೊಲ್ಲು ಸುರಿಸುವ ನಾಯಿಯಿದ್ದಂತೆ ಆನಂದ್ ಅಸ್ನೋಟಿಕರ್. ನಾವು ದೇಶಕ್ಕಾಗಿ ನಿಯತ್ತಿನ ನಾಯಿಗಳಾಗಿದ್ದೇವೆ ಎಂದು ಅಸ್ನೋಟಿಕರ್ ವಿರುದ್ದ ಕಿಡಿಕಾರಿದ್ದಾರೆ.