ದೆಹಲಿಗೆ ಸಂಪೂರ್ಣ ರಾಜ್ಯತ್ವ : ಉಪವಾಸ ಸತ್ಯಾಗ್ರಹಕ್ಕೆ ‘ಕೇಜ್ರಿವಾಲ್’ ಅಣಿ

ದೆಹಲಿಗೆ ಸಂಪೂರ್ಣ ರಾಜ್ಯತ್ವ ಕೋರಿ ಸಿಎಂ ಕೇಜ್ರಿವಾಲ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ!

ad

ದೆಹಲಿಯ ಸಂಪೂರ್ಣ ರಾಜ್ಯತ್ವಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯದ ಮೆಟ್ಟಿಲು ಏರಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ದೆಹಲಿ ನಾಗರಿಕರ ಅಭಿಪ್ರಾಯ ಸಂಗ್ರಹಿಸಲು ಫೆ. 24ರಿಂದ ಸಾಮೂಹಿಕ ಅಭಿಯಾನವನ್ನು ಆಪ್​​ ನಾಯಕ ಸಿಎಂ ಅರವಿಂದ್​​ ಕೇಜ್ರಿವಾಲ್​​​ ಹಮ್ಮಿಕೊಂಡಿದ್ದಾರೆ

 

ಇದೇ ಮುಂದಿನ ಮಾರ್ಚ್ ತಿಂಗಳು 1 ರಿಂದ​ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಿಎಂ ಕೇಜ್ರಿವಾಲ್​​ ಘೋಷಿಸಿದ್ದು. ಅಲ್ಲದೇ ಈಗಾಗಲೇ ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ಭಾರೀ ಸಿದ್ದತೆ ನಡೆಸಿಕೊಂಡಿದ್ದು,ದೆಹಲಿಗೆ ಕೇಂದ್ರ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವವರೆಗೂ ಯಾವುದೇ ಕಾರಣಕ್ಕೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂಬ ಮುನ್ನೆಚ್ಚರಿಕಾ ಸಂದೇಶ ನೀಡಿದ್ದಾರೆ. ಈ ವಿಚಾರದಲ್ಲಿ ಹೋರಾಟಕ್ಕೂ ಸಿದ್ದ. ಹಾಗೆಯೇ ಸಾವನ್ನು ಎದುಸಿಲು ಸಿದ್ದ ಎಂದು ಸಿಎಂ ಕೇಜ್ರಿವಾಲ್​​ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ದೆಹಲಿಯನ್ನು ಸಂಪೂರ್ಣ ರಾಜ್ಯ ಎಂದು ಘೋಷಿಸಬೇಕೆಂದರೆ ನಮಗೆ ಹೋರಾಟವೊಂದೇ ದಾರಿ, ಸಂಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ ಬೀದಿಗಿಳಿದರೂ ಸರಿ, ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಬೇಕಿದೆ. ಎಂದರು.

.