ಬಿಟಿವಿ ವರದಿಗಾರನ ಮೇಲಿನ ಹಲ್ಲೆ ಸಿಐಡಿಗೆ !! ಪತ್ರಕರ್ತರ ಒತ್ತಡಕ್ಕೆ ಮಣಿದ ಸರಕಾರ !!

Assault on Reporter: State Government Handed over to CIDAssault on Reporter: State Government Handed over to CID
Assault on Reporter: State Government Handed over to CID

ನಿನ್ನೆಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ಬಿಟಿವಿ ವರದಿಗಾರರ ಮೇಲಿನ ಹಲ್ಲೆ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ.

ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಯವರನ್ನು ವಿಕಾಸ ಸೌಧದಲ್ಲಿ ಭೇಟಿ ಮಾಡಿದ ಪತ್ರಕರ್ತರ ನಿಯೋಗ ತುಮಕೂರಿನಲ್ಲಿ ಕಳೆದ ಶನಿವಾರ ಬಿಟಿವಿ ವರದಿಗಾರ ವಾಗೀಶ್ ಮೇಲಿನ ಹಲ್ಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿತು.

ಪತ್ರಿಕಾಗೋಷ್ಠಿಗೆ ಎದುರು ಕರೆದ ಬಿಜೆಪಿ ಮುಖಂಡರು ಬಿಟಿವಿ ವರದಿಗಾರ ವಾಗೀಶ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ಹೆಬ್ಬಾಕ ರವಿಯ ಅಕ್ರಮ ಗಣಿಗಾರಿಕೆಯ ಸುದ್ದಿ ಮಾಡಿದ್ದಕ್ಕಾಗಿ ಬಿಟಿವಿಯ ವರದಿಗಾರನ ಮೇಲೆ ಹಲ್ಲೆ ನಡೆಸಲಾಗಿತ್ತು. ಹೆಬ್ಬಾಕ ರವಿ ಮತ್ತು ಬಾವಿಕಟ್ಟೆ ನಾಗಣ್ಣ ದಾಳಿಯ ನೇತೃತ್ವ ವಹಿಸಿದ್ದರು. ಮಾರಣಾಂತಿಕ ದಾಳಿ ಬಳಿಕ ಇಬ್ಬರೂ ಆರೋಪಿಗಳು ನಾಪತ್ತೆಯಾಗಿದ್ದರು.

 

 

ಆರೋಪಿತ ಇಬ್ಬರು ಬಿಜೆಪಿ ಮುಖಂಡರು ಸೇರಿದಂತೆ ಹಲ್ಲೆಕೋರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರ ನಿಯೋಗ ಗೃಹ ಸಚಿವರನ್ನು ಆಗ್ರಹಿಸಿತು. ನಿಯೋಗದ ಒತ್ತಾಯಕ್ಕೆ ಮಣಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಪ್ರಕರಣದ ತನಿಖೆಯನ್ನು ಕೂಡಲೇ ಸಿಐಡಿಗೆ ಹಸ್ತಾಂತರಿಸಿದ್ರು.

ನಿಯೋಗದಲ್ಲಿ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿವಿ ಮಲ್ಲಿಕಾರ್ಜುನಯ್ಯ ,ಬೆಂಗಳೂರು, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ ಪಿ ಶೆಣೈ, ಬಿಟಿವಿ ಮುಖ್ಯಸ್ಥರಾದ ಜಿಎಂ ಕುಮಾರ್, ಹಲ್ಲೆಗೊಳಗಾದ ಪತ್ರಕರ್ತ ವಾಗೀಶ್ ಸೇರಿದಂತೆ ಹಲವು ಪತ್ರಕರ್ತರು ನಿಯೋಗದಲ್ಲಿ ಭಾಗಿಯಾಗಿದ್ದರು. 24 ಗಂಟೆಯೊಳಗಡೆ ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಲಿದೆ.