ಬಾದಾಮಿಯಲ್ಲೂ ಸಿಎಂ ಸಿದ್ದರಾಮಯ್ಯಗಿಲ್ಲ “ಶಿವಯೋಗ” !! ಚಾಮುಂಡೇಶ್ವರಿಯೇ ಗತಿ !!

Badami is not safe For CM Siddaramaiah?

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲ್ಲುವುದು ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ಕ್ಷೇತ್ರ ಬದಲಾವಣೆಗೆ ಪ್ರಯತ್ನ ನಡೆಸುತ್ತಿದ್ದಾರೆ.

ಬಾದಾಮಿ ವಿಧಾನಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಗೆಲುವಿಗೆ ಸೂಕ್ತ ಎಂಬ ಹಿನ್ನಲೆಯಲ್ಲಿ ಬಾದಾಮಿಗೆ ಶಿಫ್ಟ್ ಆಗಲು ಚಿಂತಿಸಿದ್ದರು. ಆದರೆ ಇದೀಗ ಬಾದಾಮಿ ಕೂಡಾ ಸಿಎಂ ಸಿದ್ದರಾಮಯ್ಯಗೆ ಸೇಫ್ ಅಲ್ಲ ಎನ್ನಲಾಗ್ತಿದೆ.ಹೌದು. ಬಾದಾಮಿಯಲ್ಲಿ ನಿಂತು ಚುನಾವಣೆ ಗೆಲ್ಲಬಹುದೇನೋ ಎಂಬ ಸಿಎಂ ಸಿದ್ದರಾಮಯ್ಯ ಅಂದುಕೊಂಡಿದ್ದರೆ ಅದೂ ಕಷ್ಟಸಾದ್ಯ ಎನ್ನುವಂತಾಗಿದೆ. ಬಾದಾಮಿಯ ಹಾಲಿ ಶಾಸಕ ಚಿಮ್ಮನಕಟ್ಟಿ ಆರೋಗ್ಯ ಹದಗೆಟ್ಟಿರೋದ್ರಿಂದ ಸರಿಯಾಗಿ ಕೆಲಸ ನಿರ್ವಹಿಸದೆ ಆಡಳಿತ ವಿರೋಧಿ ಅಲೆ ಉಂಟಾಗಿದೆ. ಅದಕ್ಕಿಂತಲೂ ಪ್ರಮುಖ ಕಾರಣ ಬೇರೆಯೇ ಇದೆ.

ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದೇ ಆದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಬಿಸಿ ತಟ್ಟಲಿದೆ. ಬಾದಾಮಿಯಲ್ಲಿ ವೀರಶೈವ, ಲಿಂಗಾಯತ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಬಾದಾಮಿ ತಾಲೂಕಿನ ಶಿವಯೋಗ ಮಂದಿರ ವೀರಶೈವರ ಆರಾಧ್ಯ ಕ್ಷೇತ್ರ. ಇದೇ ಶಿವಯೋಗಿ ಮಂದಿರದಲ್ಲಿ ಲಿಂಗಾಯತ ವೀರಶೈವರು ಒಂದೇ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಆದ್ದರಿಂದ ಶಿವಯೋಗ ಮಂದಿರ ಸಿದ್ದು ಚುನಾವಣೆಯ ವೇಳೆ ಪರಿಣಾಮ ಬೀಳೋ ಸಾದ್ಯತೆ ಇದೆ.ಮತ್ತೊಂದೆಡೆ ಜೆಡಿಎಸ್ ನಿಂದ ಪಂಚಮಸಾಲಿ ಸಮುದಾಯದ ಬಣಜಿಗ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಅಮಿತ್ ಷಾ ಕೂಡಾ ಶಿವಯೋಗ ಮಂದಿರಕ್ಕೆ ಬೇಟಿ ನೀಡಿ ವೀರಶೈವ ಸ್ವಾಮೀಜಿಗಳು ಮತ್ತು ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಷ್ಟ ಇದೆ ಅಂದುಕೊಂಡು ಬಾದಾಮಿಯತ್ತಾ ಚಿತ್ತ ಹರಿಸಿದ್ರೆ ಸಿದ್ದರಾಮಯ್ಯಗೆ ಬಾದಾಮಿ ಇನ್ನೂ ಕಷ್ಟಕರವಾಗಿದೆ. ಈಗಾಗಲೇ ಪ್ರಚಾರ ಆರಂಭಿಸಿರುವ ಚಾಮುಂಡೇಶ್ವರಿಯೇ ಸಿಎಂ ಸಿದ್ದರಾಮಯ್ಯ ಕೈ ಹಿಡಿಯಬೇಕಿದೆ.