ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಡಿಂಡಿಮ- ದಶಕದ ನಂತರ ಕನ್ನಡಿಗರ ಕನಸು ನನಸಾಯ್ತು!

Belgaum Palike: Basappa Chikkaladinni - New Mayor - Feroz Sait reacts
Belgaum Palike: Basappa Chikkaladinni - New Mayor - Feroz Sait reacts

ಗಡಿಜಿಲ್ಲೆ ಬೆಳಗಾವಿಯ ಇಂದಿನ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಕನ್ನಡಿಗರ ಪಾಲಿಗೆ ನಿಜವಾದ ಹೋಳಿ ಹಬ್ಬವಾಗಿದ್ದು, ಕನ್ನಡ ಗುಂಪಿನ ಹಿರಿಯ ಪಾಲಿಕೆ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಮೂಲಕ ನಾಡದ್ರೋಹಿ ಎಂಇಎಸ್ ಗೆ ತೀವ್ರ ಮುಖಭಂಗವಾಗಿದೆ. ಈ ಮೂಲಕ ದಶಕದ ನಂತರ ಗಡಿ ಕನ್ನಡಿಗರ ಕನಸು ನನಸಾಗಿದೆ.
ಮೇಯರ್ ಹುದ್ದೆ ಎಸ್.ಟಿಗೆ ಮೀಸಲಾಗಿದ್ದರಿಂದ ಇಬ್ಬರುಆಕಾಂಕ್ಷಿಗಳಲ್ಲಿ ಪೈಪೋಟಿ ನಡೆದಿತ್ತು.ಇಂದು ಬೆಳಿಗ್ಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ನಡೆಸಿದ ಸಂಧಾನ ಸಫಲವಾಗಿ ಸುಚೇತಾ ಗಂಡಗುದರಿ ಅವರು ನಾಮಪತ್ರಸಲ್ಲಿಸಲಿಲ್ಲ. ಹೀಗಾಗಿ ಬಸಪ್ಪ ಚಿಕ್ಕಲದಿನ್ನಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದು. ಪಾಲಿಕೆಯ ನೂತನ ಮೇಯರ್ ಆಗಿ ಅವಿರೋಧಆಯ್ಕೆಯಾಗಿದ್ದಾರೆ.
ಉಪಮೇಯರ್ ಸ್ಥಾನ ಓಬಿಸಿ ಮಹಿಳೆಗೆ ಮೀಸಲಾಗಿದ್ದರಿಂದ ಮತ್ತು ಎಂಈಎಸ್ ಪಾಳಯದಲ್ಲಿ ಬಹುಮತ ಇದ್ದ ಕಾರಣ ಉಪಮೇಯರ್ ಪಟ್ಟ ನಾಡದ್ರೋಹಿಗಳಿಗೆ ಅನಾಯಾಸವಾಗಿ ಹೋಯಿತು.

 

ಎಂಈಎಸ್ ಗುಂಪಿನ ಮಧುಶ್ರೀ ಪೂಜಾರಿ ಒಟ್ಟು 31 ಮತಗಳನ್ನ ಪಡೆಯುವ ಮೂಲಕ ಉಪಮೇಯರ್ ಆಗಿ ಆಯ್ಕೆಯಾದರು. ಮದ್ಯಾಹ್ನ ಒಂದು ಘಂಟೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕೈಎತ್ತುವ ಮೂಲಕ ಮತದಾನ ನಡೆಯಿತು.  ಇದೇ ವೇಳೆ ನಾಡದ್ರೋಹಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮತ್ತು ಹಿರಿಯ ಸದಸ್ಯ ಪಂಡರಿ ಪರಬ್ ಕ್ಯಾತೆ ತೆಗೆದು,ಚುನಾವಣೆ ಪ್ರಕ್ರಿಯೆಯನ್ನ ಮರಾಠಿಯಲ್ಲಿ ನಡೆಸುವಂತೆ ಒತ್ತಾಯಿಸಿದ್ರು. ಇದಕ್ಕೆ ಸೊಪ್ಪು ಹಾಕದ ಚುನಾವಣಾಧಿಕಾರಿ ಪಿ.ಎ.ಮೇಘಣ್ಣವರ್, ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ.. ಬೇರೆ ಭಾಷೆಗೆ ಅವಕಾಶ ಇಲ್ಲ ಅನ್ನೊ ಮೂಲಕ ನಾಡದ್ರೋಹಿಗಳಿಗೆ ತಿರುಗೇಟು ನೀಡಿದ್ರು.
ಒಟ್ನಲ್ಲಿ ಬೆಳಗಾವಿ ಪಾಲಿಕೆಯಲ್ಲಿ ಕೊನೆಗೂ ಕನ್ನಡಿಗರೊಬ್ರು ಮೇಯರ್ ಆಗೋ ಮೂಲಕ ನಾಡದ್ರೋಹಿ ಎಂಇಎಸ್ ಗೆ ಹಿನ್ನಡೆ ಆಗಿದ್ದು, ಮುಂದಿನ ಅವಧಿಗಳಿಗೂ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಡಿಂಡಿಮ ಮೊಳಗಲಿದೆ