ಹೆಬ್ಬಾಳದ ಹೆಬ್ಬಾಗಿಲು ಬಡಿಯುತ್ತಿರುವ ಸಿಎಂ ಸಿದ್ದರಾಮಯ್ಯ !! ಗೌಡರಿಗೆ ಬೆದರಿ ಕೆಎಂ ಸೂತ್ರದ ಮೊರೆ ಹೋದ ದೊರೆ ? !!

Bengaluru: CM Siddaramaiah change his field to Hebbal.
Bengaluru: CM Siddaramaiah change his field to Hebbal.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ. ವರುಣಾದಿಂದ ಚಾಮುಂಡೇಶ್ವರಿ, ಚಾಮುಂಡೇಶ್ವರಿಯಿಂದ ಹೆಬ್ಬಾಳ ಕಡೆಗೆ ಸಿದ್ದರಾಮಯ್ಯ ಮುಖ ಮಾಡಿದ್ದಾರೆ.

ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಸಿಎಂ ಗಮನ ಈಗ ಬೆಂಗಳೂರಿನ ಹೆಬ್ಬಾಳದತ್ತ ಹರಿದಿದೆ. 2018ರ ನಿರ್ಣಾಯಕ ಚುನಾವಣೆಯಲ್ಲಿ ಅವರು ಚಾಮುಂಡೇಶ್ವರಿ ಅಥವಾ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಾರರು. ಬದಲಾಗಿ ಬೆಂಗಳೂರು ಮಹಾನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಚುನಾವಣೆಯಲ್ಲಿ ಮೈಸೂರಿನ ವರುಣಾದಿಂದ ಆಯ್ಕೆಯಾಗಿದ್ದ ಸಿದ್ದರಾಮಯ್ಯ ಈ ಬಾರಿ ಪುತ್ರ ಡಾ. ಯತೀಂದ್ರ ಅವರಿಗಾಗಿ ಕ್ಷೇತ್ರ ಬಿಟ್ಟುಕೊಡುವ ನಿಲುವು ಕೈಗೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿಯೂ ಘೋಷಿಸಿದ್ದಾರೆ. ಆದರೆ, ಚಾಮುಂಡೇಶ್ವರಿಯಿಂದ ಕಣಕ್ಕಿಳಿದರೆ ಸೋಲಾಗುವ ಸನ್ನಿವೇಶ ಎದುರಾಗಬಹುದು ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದಲೂ ಬಂದಿದೆ. ಹಾಗಾಗಿ ತವರು ಜಿಲ್ಲೆಯಿಂದಲೇ ಹೊರಹೋಗುವ ಯೋಚನೆ ಸಿದ್ದರಾಮಯ್ಯ ಅವರದ್ದು ಎನ್ನಲಾಗುತ್ತಿದೆ.

 

 

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲಲು ಸಿದ್ದರಾಮಯ್ಯ ಹಿಂದೇಟು ಹಾಕಲು ಕಾರಣ ಗೌಡರ ಹೆದರಿಕೆ. ಜೆಡಿಎಸ್ ವಶದಲ್ಲಿರುವ ಚಾಮುಂಡೇಶ್ವರಿಯಲ್ಲಿ ಜಿ ಟಿ ದೇವೇಗೌಡ ಪ್ರಭಾವಶಾಲಿ. ಮೊದಲೇ ಜೆಡಿಎಸ್ ಪ್ರಭಾವದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಂತರೆ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಕೂಡಾ ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಚಾಮುಂಡೇಶ್ವರಿಯನ್ನು ಬಿಟ್ಟು ಕೆಎಂ ಸೂತ್ರಕ್ಕೆ ಸಿದ್ದರಾಮಯ್ಯ ಚಿಂತಿಸುತ್ತಿದ್ದಾರೆ.

ಹೆಬ್ಬಾಳ ಕ್ಷೇತ್ರದಲ್ಲಿ ಕುರುಬರು, ಮುಸ್ಲಿಮರ ಸಂಖ್ಯಾಬಾಹುಳ್ಯವಿದೆ. ‘ಕೆಎಂ ಸೂತ್ರ’ (ಕುರುಬ-ಮುಸ್ಲಿಂ) ಮಾಡಿಕೊಳ್ಳಬೇಕು. ಈ ಮತ ಸಮೀಕರಣ ಮಾಡಿಕೊಂಡರೆ ಗೆಲುವು ಖಚಿತ ಎನ್ನುವುದು ಅವರ ಆಪ್ತರ ಸಲಹೆ. ಸದ್ಯ ಸಿದ್ದರಾಮಯ್ಯ ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.