ಸಿಎಂ‌ ಸಿದ್ದುಗೆ ಭೂ-ಸಂಕಷ್ಟ!!

Bengaluru: CM Siddaramaiah Involved in 'illegal' denotification of 6 acres land.
Bengaluru: CM Siddaramaiah Involved in 'illegal' denotification of 6 acres land.

ಚುನಾವಣೆ ಎದುರಿನಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ಎದುರಾಗಿದೆ. ಭೂಪಸಂದ್ರದ ಆರೂವರೆ ಎಕರೆ ಡಿನೋಟಿಫಿಕೇಷನ್ ಪ್ರಕರಣ ಸಿಎಂ ಸಿದ್ದರಾಮಯ್ಯನವ್ರನ್ನ ಕಾಡ್ತಿದ್ದು, ಈ ಪ್ರಕರಣ ಸಂಬಂಧ ಸಿದ್ದು ಬರೆದಿರೋ ಎರಡು ಪತ್ರಗಳು ಸಂಕಷ್ಟ ತಂದೊಡ್ಡಿವೆ.

ಭೂಮಿ ದಂಧೆ ನಡೆಸುವ ರವಿಶಂಕರ್ ಶೆಟ್ಟಿ ಒತ್ತಡಕ್ಕೆ ಮಣಿದು ಬಿಡಿಎಗೆ ಸಿಎಂ 2 ಪತ್ರ ಬರೆದಿದ್ರು. ಫೆಬ್ರವರಿ 14, 2014ರಂದು ಮೊದಲ ಪತ್ರ. ಮೇ 7 2014ರಂದು ಎರಡನೇ ಪತ್ರ ಬರೆದಿದ್ದಾರೆ. ಒಂದು ಚದರ ಅಡಿ ಭೂಮಿಗೆ ಚಿನ್ನದ ಬೆಲೆ ಹೊಂದಿರುವ ಡಾಲರ್ಸ್​ ಕಾಲೋನಿಯ ಆರೂವರೆ ಎಕರೆ ಭೂಮಿಯನ್ನ ಡಿನೋಟಿಫಿಕೇಷನ್ ಮಾಡಿಸಿದ್ದಾರೆ. MLA ವಸಂತ ಬಂಗೇರ ಅವರ ಲೆಟರ್​ ಮೇಲೆ ಸಿಎಂ ಎರಡೆರಡು ಬಾರಿ ಆದೇಶ ಹೊರಡಿಸಿರೋದು ಇದೀಗ ಮುಳುವಾಗಿ ಪರಿಣಮಿಸುತ್ತಿವೆ.
ಸಿಎಂ ಬರೆದಿದ್ದ ಮೊದಲ ಪತ್ರಕ್ಕೆ ಇದು ಸಾಧ್ಯವಿಲ್ಲ ಅಂತ ಖುದ್ದು ಬಿಡಿಎ ಕಮಿಷನರ್​​ ಪ್ರತಿಕ್ರಿಯಿಸಿದ್ರು. ಇಷ್ಟಿದ್ರೂ ಮತ್ತೊಂದು ಪತ್ರ ಬರೆದು ನಂತರ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸದಂತೆ ಒತ್ತಡ ಹೇರಿದ್ರು.

ಹೀಗೆ ಒತ್ತಡದ ಮೂಲಕ ಭೂಮಿ ಡಿನೋಟಿಫಿಕೇಷನ್ ಮಾಡಿಸಲಾಗಿದೆ ಎಂದು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ​ ಅನುಮತಿ ಕೋರಿ ಬಿಜೆಪಿ ಮುಖಂಡ ಪುಟ್ಟಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಬಿಜೆಪಿ ದೂರಿನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗೋದು ಕನ್ಫರ್ಮ್​​.

ಇದೇ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​​ ನಿನ್ನೆ ರಾಜಭವನಕ್ಕೆ ತೆರಳಿ ಮಾತುಕತೆ ನಡೆಸಿರೋದು ತೀವ್ರ ಕುತೂಹಲ ಕೆರಳಿಸಿದೆ.