ಸಿಎಂ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಲಿದ್ದಾರೆ ವಿದ್ಯಾಭೂಷಣ ಸ್ವಾಮೀಜಿ !!

ಸ್ವಾಮೀಜಿಗಳು ಚುನಾವಣಾ ಕಣಕ್ಕಿಳಿಯುವ ವಿಷಯದಲ್ಲಿ ಶಾಕ್ ಮೇಲೆ ಶಾಕಿಂಗ್ ಸುದ್ದಿಗಳನ್ನು ನೀಡುತ್ತಿದೆ ಬಿಜೆಪಿ ಪಾಳಯ.

ad

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಸ್ಪರ್ದಿಸಲು ಬಿಜೆಪಿ ಆಯ್ಕೆ ಮಾಡಿಕೊಂಡಿರೋದು ವಿದ್ಯಾಭೂಷಣ ಸ್ವಾಮಿಗಳನ್ನು ! ಈ ಸಂಬಂಧ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ.

ವಿದ್ಯಾಭೂಷಣ ಸ್ವಾಮೀಜಿ ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರಾಗಿದ್ದರು. ವೈವಾಹಿಕ ಸಂಬಂಧಕ್ಕಾಗಿ ಅವರು ಪೀಠ ತೊರೆದು ಆದರ್ಶಪ್ರಾಯರಾಗಿದ್ದರು.

ಸದ್ಯ ಮಠದ ಸ್ವಾಮೀಜಿ ಅಲ್ಲದಿದ್ದರೂ ಉಡುಪಿ ಅಷ್ಟಮಠ ಸೇರಿದಂತೆ ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳ ಜೊತೆ ಮಧುರ ಸಂಬಂಧ ಹೊಂದಿರುವ ವಿದ್ಯಾಭೂಷಣ ಸ್ವಾಮೀಜಿ ಹಾಡುಗಾರರೂ ಹೌದು. ಇವರ ಹಾಡುಗಳು ರಾಜ್ಯದ ಮನೆ ಮನೆಯಲ್ಲಿ ಪ್ರಸಿದ್ದಿ ಪಡೆದಿದೆ.

ಈಗಾಗಲೇ ಬಿಜೆಪಿ ಮುಖಂಡರು ವಿದ್ಯಾಭೂಷಣ ಸ್ವಾಮೀಜಿಯನ್ನು ಸಂಪರ್ಕಿಸಿದ್ದು, ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ವಿದ್ಯಾಭೂಷಣ ಸ್ವಾಮೀಜಿಗಳು ಕಣಕ್ಕಿಳಿಯುವ ಬಗ್ಗೆ ತಮ್ಮ ಗುರುಗಳಾದ ಪೇಜಾವರ ಶ್ರೀಗಳ ಸಲಹೆ ಕೇಳಿದ್ದಾರೆ ಎನ್ನಲಾಗಿದೆ. ಬಿಜೆಪಿ ಮುಖಂಡರು ವಿದ್ಯಾಭೂಷಣ ಸ್ವಾಮೀಜಿಗಾಗಿ ಪೇಜಾವರ ಶ್ರೀಗಳ ಮನವೊಲಿಸುತ್ತಿದ್ದಾರೆ.

ವಿದ್ಯಾಭೂಷಣ ಶ್ರೀಗಳ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಿಂತರೆ ಸಿಎಂ ಸಿದ್ದರಾಮಯ್ಯ ಪ್ರಬಲ ಸ್ಪರ್ಧೆ ಎದುರಿಸಬೇಕಾಗುತ್ತದೆ.