ಸಿಎಂಗೆ ಮನವಿ ಕೊಡಲು ಬಂದ ಮಹಿಳೆಗೆ ಏನಾಯ್ತು ಗೊತ್ತಾ?

Bengaluru: Escort staff pushed Woman during the petition to CM.
Bengaluru: Escort staff pushed Woman during the petition to CM.

ಸಾರ್ವಜನಿಕರು ಸಿಎಂ ಎದುರು ತಮ್ಮ ಕುಂದು-ಕೊರತೆ ಹೇಳಿಕೊಳ್ಳೋಕೆ ಅಂತ ಆಗಮಿಸ್ತಾರೆ. ಆದರೇ ಸಿಎಂ ಭದ್ರತಾ ಸಿಬ್ಬಂದಿ ಮಾತ್ರ ಅವರನ್ನು ಭದ್ರತೆಯ ಹೆಸರಿನಲ್ಲಿ ದೂರ ತಳ್ತಾರೆ.

ಈ ಹಿಂದೆ ಕೂಡ ಸಾಕಷ್ಟು ಸಾರ್ವಜನಿಕರು ಇದೇ ರೀತಿ ತೊಂದರೆಗೊಳಗಾಗಿದ್ದು, ಇಂದು ಕೂಡ ಮಹಿಳೆಯೊರ್ವಳು ಸಿಎಂ ಭೇಟಿಗೆ ಬಂದಿದ್ದರೇ ಭದ್ರತಾ ಸಿಬ್ಬಂದಿ ಆಕೆಯನ್ನು ತಳ್ಳಿ ಅವಾಂತರ ಸೃಷ್ಟಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿಗೆಂದು ಮಹಿಳೆಯೊರ್ವಳು ಆಗಮಿಸಿದ್ದು, ಸಿಎಂ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಹಿಳೆ ಸಿಎಂಗೆ ಮನವಿ ಪತ್ರ ಕೊಡಲು ಯತ್ನಿಸಿದ್ದಾರೆ. ಆಗ ಮಹಿಳೆಗೆ ಅಡ್ಡಿ ಪಡಿಸಿದ ಸಿಎಂ ಭದ್ರತಾ ಸಿಬ್ಬಂದಿ ಆಕೆಯನ್ನು ಜೋರಾಗಿ ತಳ್ಳಿದ್ದಾರೆ.

ಮಹಿಳೆಯೆಂದು ಸಹ ನೋಡದೇ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ತಳ್ಳಿದ್ದಾರೆ. ಆಗ ಮಹಿಳೆ ಆಯತಪ್ಪಿ ಬೀಳುವಂತಾಗಿದ್ದರು. ಕೊನೆಗೆ ಸಾವರಿಸಿಕೊಂಡಿದ್ದಾರೆ. ಸಿಎಂಗೆ ಮನವಿ ನೀಡಲು ಅವಕಾಶ ನೀಡದ ಭದ್ರತಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.