ಬಳ್ಳಾರಿಯಲ್ಲಿ ಕಾಂಗ್ರೆಸ್​​ಗೆ ಅಭ್ಯರ್ಥಿಯೇ ಸಿಗ್ತಿಲ್ಲ-ಅದಕ್ಕೆ ಬಿಜೆಪಿ ನಾಯಕರ ಮನವೊಲಿಸುತ್ತಿದ್ದಾರೆ- ಸಿಎಂ ವಿರುದ್ಧ ಜನಾರ್ಧನ್ ರೆಡ್ಡಿ ವಾಗ್ದಾಳಿ!!

Bengaluru: G. Janardhana Reddy Statement Against CM Siddaramaiah.
Bengaluru: G. Janardhana Reddy Statement Against CM Siddaramaiah.

ತಮ್ಮ ವಿರುದ್ಧ ಮತ್ತೊಮ್ಮೆ ಎಸ್​ಐಟಿ ವಿಚಾರಣೆ ನಡೆಸುವ ಮೂಲಕ ಪ್ರತಿಕಾರದ ರಾಜಕಾರಣ ನಡೆಸಲು ಮುಂಧಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ad

ನಿಮಗೆ ಬಳ್ಳಾರಿಯಲ್ಲಿ ಒಬ್ಬ ಅಭ್ಯರ್ಥಿಯೂ ಸಿಗ್ತಿಲ್ಲ ಅದಕ್ಕೆ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದೀರಿ ಎಂದು ರೆಡ್ಡಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಜನಾರ್ಧರ್ ರೆಡ್ಡಿ, ಬಳ್ಳಾರಿಯಲ್ಲಿ ಕಾಂಗ್ರೆಸ್​​​ಗೆ ಒಬ್ಬ ಅಭ್ಯರ್ಥಿಯೂ ಸಿಗುತ್ತಿಲ್ಲ. ಹೀಗಾಗಿ ಆನಂದ್ ಸಿಂಗ್ ಹಾಗೂ ನಾಗೇಂದ್ರರನ್ನು ಕಾಂಗ್ರೆಸ್​​ಗೆ ಸೆಳೆಯೋ ಯತ್ನ ನಡೆಸಿದ್ದೀರಿ.

 

 

ಅಂತ ದುಸ್ಸಾಹಸ ಮಾಡಿದ್ರೆ ಬಳ್ಳಾರಿಯ ಒಂಬತ್ತು ಕ್ಷೇತ್ರಗಳಲ್ಲಿ ನಿಮಗೆ ಡೆಪಾಸಿಟ್​ ಕೂಡ ಬರಲ್ಲ ಎಂದು ರೆಡ್ಡಿ ಎಚ್ಚರಿಸಿದ್ದಾರೆ.
ಅಲ್ಲದೇ ಆನಂದ್ ಸಿಂಗ್ ಹಾಗೂ ನಾಗೇಂದ್ರ ಅವರಿಗೂ ಕಿವಿಮಾತು ಹೇಳಿದ ಜನಾರ್ಧನ್ ರೆಡ್ಡಿ, ಕಾಂಗ್ರೆಸ್​ನವರ ಮಾತು ಕೇಳಿ ನೀವು ಬಿಜೆಪಿ ಬಿಟ್ಟರೇ ನಿಮ್ಮನ್ನು ಬಳ್ಳಾರಿಯ ಜನತೆ ಎಂದೂ ಕ್ಷಮಿಸಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ರೆಡ್ಡಿಗೆ ಸಂಕಷ್ಟ ತಂದೊಡ್ಡುವ ಪ್ರಯತ್ನ ನಡೆಸಿರುವ ರಾಜ್ಯಸರ್ಕಾರ ಹಾಗೂ ಸಿಎಂಗೆ ರೆಡ್ಡಿ ಸಖತ್​ ಟಾಂಟ್​ ನೀಡಿದ್ದಾರೆ.