ಎಮ್​ಎಲ್​ಎ ಪುತ್ರನಿಗೆ ಕೊನೆಗೂ ಸಿಗದ ಬೇಲ್​​- ಜಾಮೀನು ಅರ್ಜಿ ಹೈಕೋರ್ಟ್​ ಅಂಗಳಕ್ಕೆ!

Mohammed Nalapad's Bail Application Rejected.
Mohammed Nalapad's Bail Application Rejected.

ವಿದ್ವತ್ ಮೇಲೆ ಹಲ್ಲೆ ನಡೆಸಿ, ಪರಪ್ಪನ ಅಗ್ರಹಾರ ಸೇರಿರೋ ಎಂ.ಎಲ್​.ಎ ಹ್ಯಾರೀಶ್ ಪುತ್ರ ಮೊಹಮ್ಮದ್ ನಲಪಾಡ್​ ಮತ್ತು ಗ್ಯಾಂಗ್ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಮೊಹಮ್ಮದ್ ನಲಪಾಡ್ ಌಂಡ್ ಗ್ಯಾಂಗ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ 63ನೇ ಸಿಟಿ ಸಿವಿಲ್ ಕೋರ್ಟ್, ಇಂದು ಜಾಮೀನು ಅರ್ಜಿಯನ್ನ ತಿರಸ್ಕರಿಸಿದೆ. ಹೀಗಾಗಿ ಇನ್ನಷ್ಟು ದಿನ ನಲಪಾಡ್, ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಅಲ್ಲದೆ ನಲಪಾಡ್‌ನ 6 ಸಹಚರರ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಇನ್ನು, ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ, ಆರೋಪಿಗಳು ಹೈಕೋರ್ಟ್ ಮೊರೆ ಹೋಗಬಹುದು.

ಜಾಮೀನು ಅರ್ಜಿ ವಾಜಾಗೊಳ್ಳಲು ಕಾರಣವೇನು?

ನಲಪಾಡ್ ಸೇರಿದಂತೆ 6 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಲು ನ್ಯಾಯಾಧೀಶರು ಕೆಲವು ಕಾರಣಗಳನ್ನ ಆದೇಶದ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಅವರು ಆದೇಶದ ಪ್ರತಿಯಲ್ಲಿ ಉ್ಲಲೇಖಿಸಿರುವ ಅಂಶಗಳು ಹೀಗಿವೆ. ವಿದ್ವತ್ ಮೇಲೆ ಹಲ್ಲೆ ನಡೆಸಿರುವುದು ಗಂಭೀರ ಪ್ರಕರಣ. ಹತ್ಯೆ ತನಿಖೆ ಇನ್ನೂ ಪೂರ್ಣವಾಗಿಲ್ಲ. ಗಾಯಾಳು ವಿದ್ವತ್‌ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಾಳು ವಿದ್ವತ್‌ನ ಹೇಳಿಕೆ ಇನ್ನೂ ದಾಖಲಾಗಿಲ್ಲವಿದ್ವತ್‌ಗೆ ಗಂಭೀರವಾದ ಗಾಯಗಳಾಗಿವಈ ಹಂತದಲ್ಲಿ ಜಾಮೀನು ನೀಡಿದರೆ ಆರೋಪಿಗಳು ಪ್ರಭಾವ ಬೀರುವ ಸಾಧ್ಯತೆ.

 

ಹಲ್ಲೆ ಮಾಡಿದ ಬಳಿಕ ಆರೋಪಿಗಳು ಹಿಂಬಾಲಿಸಿ ಆಸ್ಪತ್ರೆಗೆ ತೆರಳಿ ಹಲ್ಲೆ ಮಾಡಿದ್ದಾರೆ ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ.
ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಹೇಳಿದ್ದೇನು? ಗಾಯಾಳು ವಿದ್ವತ್ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್‌ ತೀರ್ಪು ಬಂದ ಬಳಿಕ ಸಂತಸ ವ್ಯಕ್ತಪಡಿಸಿದರು. ‘ ವಿದ್ವತ್‌ಗೆ ಬಹಳ ಗಂಭೀರ ಗಾಯಗಳಾಗಿವೆ. ವೈದ್ಯಕೀಯ ವರದಿ ಕೂಡ ಬಂದಿದೆ. ಜಾಮೀನು ಕೊಡುವ ಪ್ರಕರಣ ಇದಲ್ಲ ತೀರ್ಪಿನಿಂದ ಸಮಾಜಕ್ಕೆ ಉತ್ತಮವಾಗಿದೆ ಎಂದ್ರು