ನಗರದಲ್ಲಿ ಮಹಿಳೆಯರು ಪೊಲೀಸರಿಗೆ ಪೋನ್ ಮಾಡ್ಕೊಂಡು ಮನೆಯಿಂದ ಹೊರಬರಬೇಕು- ರಾಜ್ಯಸರ್ಕಾರದ ವಿರುದ್ಧ ಆರ್​.ಅಶೋಕ್ ಟೀಕೆ

Bengaluru: R.Ashok Outrage against State Government in BJP Office.

ಬೆಂಗಳೂರಿನಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ. ಗೂಂಡಾಗಳೇ ಬೆಂಗಳೂರನ್ನು ಆಳ್ತಾ ಇದ್ದಾರೆ.

 

ಮೊದಲು ಪೊಲೀಸರಿಗೆ ರೌಡಿಗಳು ಹೆದರತಾ ಇದ್ರು. ಆದರೇ ಈಗ ಹಾಡಹಗಲೇ ಎಸಿಪಿ ಪತ್ನಿಯ ಸರವನ್ನೇ ಕಿತ್ತುಕೊಂಡು ಹೋಗ್ತಾರೆ. ಹೆಣ್ಣುಮಕ್ಕಳು ಪೊಲೀಸರ ಅನುಮತಿ ಪಡೆದು ಮನೆಯಿಂದ ಹೊರಬರುವ ಸ್ಥಿತಿ ಬೆಂಗಳೂರಿನಲ್ಲಿ ಇದೆ ಎಂದು ಮಾಜಿಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಆರ್ ಅಶೋಕ್ ರಾಜ್ಯದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್​, ಒಂದು ವಾರದಲ್ಲಿ 13 ಜನ ಪೊಲೀಸರ ಮೇಲೆಯೇ ಹಲ್ಲೆ ಮಾಡಲಾಗಿದೆ. ಪೊಲೀಸರ ಗನ್​ನ್ನೇ ಕಿತ್ಕೊಂಡು ಹೋಗ್ತಾರೆ. ಹೋಮಿನಿಸ್ಟರ್​ಗೆ ಅಡ್ವೇಸರ್​​ ಹಿಂದೆಂದೂ ಇರಲಿಲ್ಲ. ಈಗ ಇದ್ದಾರೆ. ಅವರು ಟ್ರಾನ್ಸಫರ್​ ದಂಧೆಯಲ್ಲೇ ಬ್ಯುಸಿ ಆಗಿದ್ದಾರೆ.

 

ಹೈಕೋರ್ಟ್​್ ಆದೇಶ ಮೀರಿ 2 ತಿಂಗಳಿಗೊಮ್ಮೆ ಟ್ರಾನ್ಸಫರ್​ ಮಾಡ್ತಿದ್ದಾರೆ. ಇದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರ್.ಅಶೋಕ ಆರೋಪಿಸಿದ್ದಾರೆ.
ಬೆಂಗಳೂರು ಐಟಿ ಸಿಟಿ ಬದಲು ಕ್ರೈಂ ಸಿಟಿ ಆಗ್ತಾ ಇದೆ. ಸರ್ಕಾರ ಪೊಲೀಸ್ ಇಲಾಖೆಗೆ ಕೆಲಸ ನಿರ್ವಹಿಸಲು ಬೇಕಾದ ಮಾನಸಿಕ ಸ್ತೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಪದೇ -ಪದೇ ಟ್ರ್ಯಾನ್ಸಫರ್ ಮಾಡಿ ಅವರ ಮಾನಸಿಕ ಸ್ತೈರ್ಯ ಕುಗ್ಗಿಸಲಾಗುತ್ತಿದೆ. ಗೌರಿ ಹಂತಕರ ಸುಳಿವು ಸಿಕ್ಕಿದೆ ಎಂದು ಗೃಹಸಚಿವರು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಆದರೇ ವಿವರ ಕೊಡ್ತಿಲ್ಲ. ಗೂಂಡಾಗಳನ್ನು ಬಂಧಿಸುವ ಬದಲು ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಬಂಧಿಸುವ ಕೆಲಸ ನಡೆದಿದೆ ಎಂದು ಆರ್.ಅಶೋಕ ಆರೋಪಿಸಿದರು. ಒಟ್ಟಿನಲ್ಲಿ ನಗರದಲ್ಲಿ ಪೊಲೀಸರ ಮೇಲೆ ಹಲ್ಲೆಗಳು ನಡೆಯುತ್ತಿರುವ ಬೆನ್ನಲ್ಲೇ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಪೊಲೀಸರ ಬೆಂಬಲಕ್ಕೆ ನಿಂತಿದ್ದಾರೆ.