ಕಲ್ಪತರು ನಾಡಿನಲ್ಲಿ ಪರಿವರ್ತನಾ ರ‌್ಯಾಲಿ- ಬಿಎಸ್​ವೈ-ಶೋಭಾ ಕರಂದ್ಲಾಜೆ ಭಾಗಿ

ನಿನ್ನೆಯಷ್ಟೇ ಅಮಿತ್ ಷಾ ರಿಂದ ಚಾಲನೆಗೊಂಡ ಬಿಜೆಪಿ ಪರಿವರ್ತನಾ ಯಾತ್ರೆ ತುಮಕೂರು ತಲುಪಿದೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಎರಡನೇ ದಿನದ ಯಾತ್ರೆಗೆ ಬಿಜೆಪಿ ಪಾಳಯ ಸಜ್ಜಾಗಿದ್ದು, ಇಂದು ಸಂಜೆ 6 ಗಂಟೆಯವರೆಗೆ ಪರಿವರ್ತನಾ ಯಾತ್ರೆ ಜಿಲ್ಲೆಯಾದ್ಯಂತ ಸಂಚರಿಸಲಿದೆ.

ನಿನ್ನೆ ಮಾದಾವರದಲ್ಲಿ ಆರಂಭಗೊಂಡ ಯಾತ್ರೆ ಸಂಜೆ ಕುಣಿಗಲ್​​ ತಲುಪಿದ್ದು, ಯಡಿಯೂರು ಸಿದ್ದಲಿಂಗೇಶ್ವರ ಸನ್ನಿಧಿಯಲ್ಲಿ ತಂಗಿತ್ತು. ಇಂದು ಬೆಳಗ್ಗೆ ಯಾತ್ರೆ ಪುನರಾರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಯಡಿಯೂರು ಸಿದ್ದಲಿಂಗೇಶ್ವರ​ ನಿಗೆ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ನಾಯಕರು ಬಿಎಸ್​​ವೈ ಸಾಥ್​ ನೀಡಿದರು.


ಕಾರ್ಯಕರ್ತರ ಜೊತೆ ಉಪಾಹಾರ ಸವಿದ ಬಿಎಸ್​ವೈಯಲ್ಲಿ ತುರುವೆಕೆರೆ,ಚಿಕ್ಕನಾಯಕನಹಳ್ಳಿ,ಹೆಬ್ಬೂರು ಸೇರಿದಂತೆ ಹಲವೆಡೆ ಯಾತ್ರೆಯಲ್ಲಿ ಪಾಲ್ಗೊಂಡರು. 75 ದಿನಗಳ ಕಾಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ರಥ ಸಂಚರಿಸಲಿದೆ.