ಮುದ್ದು ಮಾಡಿ ಮುತ್ತು ಕೊಡಲಾ ? : ಸಿದ್ದರಾಮಯ್ಯರನ್ನು ಕೇಳಿದ ಈಶ್ವರಪ್ಪ !!

ad

ನಾನು ಮುದ್ದು ಮಾಡಿ ಮುತ್ತು ಕೊಡಲಾ ಎಂದು ಸಿಎಂ ಸಿದ್ದರಾಮಯ್ಯರನ್ನು ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಈ ರೀತಿ ಈಶ್ವರಪ್ಪ ಕೇಳಿರೋದು ಸಿದ್ದರಾಮಯ್ಯ ಮೇಲೆ ಪ್ರೀತಿ ಉಕ್ಕಿಹರಿದಲ್ಲ. ಬದಲಾಗಿ ಆಕ್ರೋಶದಿಂದ ! ವಿಧಾನಪರಿಷತ್ತಿನಲ್ಲಿ ಇಂದು ಕೆ ಜೆ ಜಾರ್ಜ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ನಿಲುವಳಿ ಸೂಚನೆ ಮಂಡಿಸಿದ್ದರು. ಪ್ರಾಥಮಿಕ ಪ್ರಸ್ತಾವನೆಯನ್ನಷ್ಟೇ ಮಂಡಿಸಲು ಸಭಾಪತಿ ಡಿ ಎಚ್ ಶಂಕರಮೂರ್ತಿ ಅವಕಾಶ ನೀಡಿದ್ದರು. ಸಿಕ್ಕ ಅವಕಾಶದಲ್ಲಿ ಪ್ರಿಲಿಮಿನರಿ ಸಬ್ಮೀಷನ್ ಮಾಡೋ ಬದಲು, ಕೆ ಜೆ ಜಾರ್ಜ್ ಕೊಲೆಗಡುಕ ಎಂದು ಹೇಳಿಬಿಟ್ಟರು ಕೆ ಎಸ್ ಈಶ್ವರಪ್ಪ.

ಈಶ್ವರಪ್ಪ ಮಾತನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದ್ರು. ಕಾಂಗ್ರೆಸ್ ಗದ್ದಲದಿಂದ ಈಶ್ವರಪ್ಪ ಪ್ರಸ್ತಾವನೆ ಮಂಡಿಸಲು ಸಾದ್ಯವಾಗಲಿಲ್ಲ. ಆಗ ಸಿದ್ದರಾಮಯ್ಯರನ್ನು ಉದ್ದೇಶಿಸಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ಪ್ರತಿಪಕ್ಷದವರಿಗೆ ಮಾತನಾಡಲು ಕಾಂಗ್ರೆಸ್ ಸದಸ್ಯರು ಬಿಡುತ್ತಿಲ್ಲ ಎಂದು ಅವಲತ್ತುಕೊಂಡರು. ಈಶ್ವರಪ್ಪ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸರಿಯಾದ ರೀತಿಯಲ್ಲಿ ಸಬ್ಮೀಷನ್ ಮಾಡಿ. ಸುಮ್ಮನೆ ಆರೋಪ ಮಾಡಿ ನಮ್ಮ ಶಾಸಕರನ್ನು ಪ್ರಚೋದಿಸಿದ್ರೆ ಹೀಗೆ ಆಗುತ್ತೆ ಅಂದರು. ತಕ್ಷಣ ಎದ್ದು ನಿಂತ ಕೆ ಎಸ್ ಈಶ್ವರಪ್ಪ, ” ಆರೋಪ ಮಾಡದೆ ಕಾಂಗ್ರೆಸ್ ಶಾಸಕರನ್ನು ಮುದ್ದಾಡಿ ಮುತ್ತು ಕೊಡಲಾ ? ನಾವಿರೋದೆ ಸರಕಾರದ ತಪ್ಪುಗಳನ್ನು ಹೇಳೋಕೆ” ಅಂದರು.

 

Watch Here: