ಸಿದ್ದರಾಮಯ್ಯ ತಲೆಯಲ್ಲಿ ಸಗಣಿ !! ಸಿಎಂ ಬಗ್ಗೆ ಈಶ್ವರಪ್ಪ ಹೇಳಿದ್ದೇನು ?

ವಿಧಾನಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪಗೆ ತಲೆಯಲ್ಲಿ ಮೆದುಳಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ತುಂಬಿದೆ. ನಾನು ವಿಪಕ್ಷ ನಾಯಕ. ವಿರೋಧ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ಹೇಗೆ, ಯಾವ ಭಾಷೆ ಬಳಸಬೇಕು ಎಂಬ ಪರಿಜ್ಞಾನ ಸಿದ್ದರಾಮಯ್ಯಗೆ ಇಲ್ಲ ಎಂದು ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ರು.

ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಬಂದ ಕೆ ಎಸ್ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಕೆ ಎಸ್ ಈಶ್ವರಪ್ಪರ ಹಲವು ಹೇಳಿಕೆಗಳ ಬಗ್ಗೆ ಸಿದ್ದರಾಮಯ್ಯ ಬಳಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ಈಶ್ವರಪ್ಪನ ತಲೆಯಲ್ಲಿ ಮೆದುಳಿಲ್ಲ ಎಂದಿದ್ದರು. ಅದರ ಬೆನ್ನಿಗೇ ಮಾತನಾಡಿದ್ದ ಸಚಿವ ಎಂ ಬಿ ಪಾಟೀಲ್, ಈಶ್ವರಪ್ಪನ ಬಾಯಿಗೂ ತಲೆಗೂ ಕನೆಕ್ಷನ್ ಇಲ್ಲ ಎಂದಿದ್ದರು.

ಇಂದು ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ತುಂಬಿದೆ ಅಂದರು