ಮತ್ತೆ ಕಮಲದ ತೆಕ್ಕೆ ಸೇರಿದ ಚೈತ್ರಶ್ರೀ- ಅಮಾನತ್ತು ಆದೇಶ ವಾಪಸ ಪಡೆದ ಬಿಜೆಪಿ!

BJP withdraws suspension order to Chaithrashree

ಮಹತ್ವದ ಬೆಳವಣಿಗೆಯೊಂದರಲ್ಲಿ ಚಿಕ್ಕಮಗಳೂರು‌ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಅಮಾನತು ಮಾಡಿದ್ದ ಮಾಜಿ ಜಿ.ಪಂ ಅಧ್ಯಕ್ಷೆ ಚೈತ್ರಶ್ರೀ ಅಮಾನತು ಆದೇಶವನ್ನು ರಾಜ್ಯ ಬಿಜೆಪಿ ವಾಪಾಸ್ ಪಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಮಾನ ಆದೇಶವನ್ನು ವಾಪಾಸ್ ಪಡೆದು ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಆಡಳಿತ ಬಿಜೆಪಿ ಚುಕ್ಕಾಣಿಯಲ್ಲಿದ್ದು ಮೊದಲ ಭಾರಿ ಆಧ್ಯಕ್ಷರಾಗುವವರಿಗೆ 20 ತಿಂಗಳು ಎರಡನೇ ಅವಧಿ ಅಧ್ಯಕ್ಷರಾಗುವವರಿಗೆ 40 ತಿಂಗಳು ಎಂದು ನಿಗಧಿ ಮಾಡಲಾಗಿತ್ತು. ಇದ್ರಂತೆ ಚೈತ್ರಶ್ರೀ ಮೊದಲ ಭಾರಿಗೆ 20 ತಿಂಗಳು ಪೂರೈಸಿದ್ರು. ಆದ್ರೆ 20 ತಿಂಗಳು ಅವಧಿ ಮುಗಿದಾಗ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತಕರಾರು ಎತ್ತಿದ್ರು. ಅಲ್ಲದೇ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾದ್ರೆ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೇಟ್ ನೀಡುವಂತೆ ಬೇಡಿಕೆ ಇಟ್ಟಿದ್ರು.

ಹೀಗಾಗಿ ಪಕ್ಷದ ನಿಯಮ ಉಲ್ಲಂಘಿಸಿದ ಪರಿಣಾಮ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಚೈತ್ರಶ್ರೀಯವರನ್ನು 6 ವರ್ಷಗಳ ಕಾಲ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿತ್ತು. ಇದಾದ ಕೆಲ ದಿನಗಳ ಬಳಿಕ ಚೈತ್ರಶ್ರೀ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಹೀಗಾಗಿ ಇಂದು 6 ವರ್ಷಗಳ ಕಾಲ ಚೈತ್ರಶ್ರೀ ರವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತು ಮಾಡಿದ್ದ ಆದೇಶವನ್ನು ರಾಜ್ಯ ಬಿಜೆಪಿ ವಾಪಾಸ್ಸು ಪಡೆಯಲಾಗಿದೆ. ಇನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಬಿಎಸ್ ವೈ ಸೂಚನೆ ನೀಡಿದ್ದಾರೆ…