ಜಾರಕಿ”ಹೋಳಾಗಿಲ್ಲ” !! ಸಹೋದರರಲ್ಲಿ ಸವಾಲಿಲ್ಲ ಅಂದ್ರು ಸಚಿವ ರಮೇಶ್ !!

ಬೆಳಗಾವಿ ರಾಜಕಾರಣದ ಧ್ರುವಗಳಂತಿರುವ ಜಾರಕಿಹೊಳಿ ಸಹೋದರರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಸದಾಕಾಲ ಕೇಳಿಬರುವ ಮಾತು. ಆದರೆ ನಮ್ಮ ಅಣ್ಣತಮ್ಮಂದಿರ ನಡುವೆ ಯಾವುದೇ ವೈಮನಸ್ಸು ಇಲ್ಲ. ನಾವೆಲ್ಲರೂ ಸಹೋದರರು ಎನ್ನುವ ಮೂಲಕ ಸಚಿವ ರಮೇಶ್ ಜಾರಕಿಹೊಳಿ ಎಲ್ಲ ವಿವಾದಗಳಿಗೆ ತೆರೆ ಎಳೆದಿದ್ದಾರೆ.

ಇಂದು ರಾಯಚೂರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ. ಸತೀಶ್​ ಅವರಿಗೆ ಈ ಹಿಂದೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ನಾನು ಸಲಹೆ ನೀಡಿದ್ದೆ. ಆದರೆ ಅವರು ನಮ್ಮ ಸಲಹೆಯನ್ನ ಸ್ವೀಕರಿಸಿಲ್ಲ. ಹಾಗಂತ ಅವರ ಮತ್ತು ನಮ್ಮ ನಡುವೆ ಯಾವುದೇ ಭಿನ್ನಮತ ಇಲ್ಲ ಎಂದು ರಮೇಶ್ ಪುನರುಚ್ಛಿರಿಸಿದ್ದಾರೆ.

ಅಲ್ಲದೇ ನಾವು ಅಣ್ಣ ತಮ್ಮಂದಿರು ಯಾರ ಮೇಲೂ ಡಿಪೆಂಡ್ ಇಲ್ಲ. ನಾವೆಲ್ಲರೂ ವೈಯಕ್ತಿಕ ಬಲದಿಂದ ಬೆಳೆದು ಬಂದವರು. ಬಾಲಚಂದ್ರ ಜಾರಕಿಹೋಳಿ, ಸತೀಶ್ ಜಾರಕಿಹೋಳಿ, ಲಕನ್ ಎಲ್ಲರೂ ಒಂದೇ. ಇದೀಗ ಮತ್ತೊಬ್ಬ ಸಹೋದರ ರಾಜಕೀಯಕ್ಕೆ ಬರಲು ಸಜ್ಜಾಗಿದ್ದಾನೆ. ನಾವು ಜೆಡಿಎಸ್​ನವರ ತರ ಯಾವತ್ತು ಜಗಳ ಆಡಿಲ್ಲ ಎಂದು ರಮೇಶ್ ಸ್ಪಷ್ಟಪಡಿಸಿದರು. ಆ ಮೂಲಕ ಜಾರಕಿಹೊಳಿ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವದಂತಿಗಳಿಗೆ ತೆರೆ ಬಿದ್ದಂದಾಗಿದ್ದು. ನಾವೆಲ್ಲರೂ ಒಂದೇ ಸಂದೇಶವನ್ನು ರಾಜಕೀಯ ಕ್ಷೇತ್ರಕ್ಕೆ ಸಚಿವ ರಮೇಶ್​ ಜಾರಕಿಹೊಳಿ ತುಂಬಾ ಸ್ಟ್ರಾಂಗಾಗಿ ರವಾನಿಸಿದ್ದಾರೆ. .