ಮೊದಲ ಹಂತದ ಗುಜರಾತ್ ಚುನಾವಣೆಗೆ ಕ್ಷಣಗಣನೆ !! ಪಕ್ಷ, ಆಯೋಗದ ಕಸರತ್ತು !!

Campaigning ends for first phase of Gujarat polls.
Campaigning ends for first phase of Gujarat polls.

ಗುಜರಾತ್​​ ಮಹಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೌಂಟ್​ಡೌನ್​ ಶುರುವಾಗಿದೆ. 19 ಜಿಲ್ಲೆಗಳಲ್ಲಿ ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ನಿನ್ನೆ ಸಂಜೆಯಿಂದಲೇ ಮೊದಲ ಹಂತಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.

ಸೌರಾಷ್ಟ-ಕಚ್​- ರಾಜ್ಕೋಟ್​​- ಅಮ್ರೆಲಿ- ಭಾವನಗರ- ದೇವ್ಭಮಿ ದ್ವಾರಕಾ,- ಗಿರ್​ ಸೋಮನಾಥ್​-ಜಾಮ್ನಗರ್​- ಜುನಾಗಡ್​- ಮೊರ್ಬಿ- ಪೋರಬಂದರ್​- ಸುರೇಂದ್ರನಗರ್​- ಕಚ್​- ದಕ್ಷಿಣ ಗುಜರಾತ್​- ಸೂರತ್​- ಭರೊಚ್​- ಡ್ಯಾಂಗ್​- ನರ್ಮದಾ- ನವ್ಸಾರಿ- ಟ್ಯಾಪಿ- ವಲ್ಸಾದ್​ ಜಿಲ್ಲೆಗಳಲ್ಲಿ ನಾಳೆ ಮತಚಲಾವಣೆ ಪ್ರಕ್ರಿಯೆ ನಡೆಯಲಿದೆ.

 

182 ಕ್ಷೇತ್ರಗಳ ಪೈಕಿ 89 ಕ್ಷೇತ್ರಗಳಲ್ಲಿ ಮತದಾನಕ್ಕೆ ಈಗಾಗಲೇ ಆಯೋಗ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ರಾಜ್​ಕೋಟ್, ಜುನಗಾದ್, ಅಮ್ರೇಲಿ, ಮೋರ್ಬಿ, ಕಚ್ ಮತ್ತು ಸುರೇಂದ್ರ ನಗರ್​​​ ಸೇರಿ 19 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ 977 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇದ್ರಲ್ಲಿ 57 ಮಹಿಳಾ ಅಭ್ಯರ್ಥಿಗಳಿದ್ದಾರೆ.

 

2012ರ ಎಲೆಕ್ಷನ್​​ನಲ್ಲಿ ಕಚ್​-ಸೌರಾಷ್ಟ್ರದ ಒಟ್ಟು 55 ಕ್ಷೇತ್ರಗಳಲ್ಲಿ ಬಿಜೆಪಿ 35 ಮತ್ತು ಕಾಂಗ್ರೆಸ್​ 20 ಕ್ಷೇತ್ರಗಳಲ್ಲಿ ಗೆದ್ದಿದ್ದವು. ದಕ್ಷಿಣ ಗುಜರಾತ್​​ನ 35 ಕ್ಷೇತ್ರಗಳಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಜಯಿಸಿತ್ತು.

 

ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಕೊನೇ ಹಂತದ ಕಸರತ್ತು ನಡೆಸಲಿದೆ. ಮೊದಲ ಹಂತದ ಚುನಾವಣೆ ನಡೆಯುವ ಜಿಲ್ಲೆಗಳ ಹತ್ತಿರದಲ್ಲಿರುವ ಎರಡನೇ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿ ಬಹಿರಂಗ ರ‌್ಯಾಲಿ ಹಮ್ಮಿಕೊಂಡಿದೆ. ಇದು ಮೊದಲ ಹಂತದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

ಮತ್ತೊಂದೆಡೆ ಚುನಾವಣಾ ಆಯೋಗ ನಾಳಿನ ಮತಚಲಾವಣೆ ಪ್ರಕ್ರಿಯೆಗೆ ಸಿದ್ದತೆ ನಡೆಸಿದೆ. ಮತ ಕ್ಷೇತ್ರಕ್ಕೆ ಸಂಬಂಧಪಡದ ಯಾವುದೇ ರಾಜಕೀಯ ಮುಖಂಡರು ಕ್ಷೇತ್ರಗಳಲ್ಲಿ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪೊಲೀಸ್ ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿರುವ ಆಯೋಗ ನಾಳಿನ ಮತಚಲಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಸಲು ಸಿದ್ದತೆ ಮಾಡಿಕೊಂಡಿದೆ.