ಕೇಂದ್ರದಿಂದ ಪ್ರತ್ಯೇಕಧರ್ಮ ಪ್ರಸ್ತಾಪ ಮೂಲೆ ಗುಂಪು!

Central Home Department Says About -Issue of religious minority status to Lingayat
Central Home Department Says About -Issue of religious minority status to Lingayat

ಕರ್ನಾಟಕ ಕುರುಕ್ಷೇತ್ರದ ಹೊತ್ತಲ್ಲಿ ಸ್ಫೋಟಕ ಬೆಳವಣಿಗೆಯಾಗಿದೆ. ಹೌದು ಸಿಎಂ ಸಿದ್ಧರಾಮಯ್ಯ ಚುನಾವಣೆ ಹೊತ್ತಿನಲ್ಲೇ ಪ್ರತ್ಯೇಖ ಲಿಂಗಾಯತ್ ಧರ್ಮ ವಿಚಾರವನ್ನು ಎತ್ತಿ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದರು. ಆದರೇ ಇದೀಗ ಸಿಎಂ ಸಿದ್ದು ತಂತ್ರವೇ ಸಿದ್ದರಾಮಯ್ಯನವರಿಗೆ ಮುಳುವಾಗುವ ಸಾಧ್ಯತೆ ಇದೆ.

ಹೌದು ಸಿದ್ಧು ಧರ್ಮ ತಂತ್ರವನ್ನೇ ಕೇಂದ್ರ ಸರ್ಕಾರ ಮೂಲೆಗುಂಪು ಮಾಡಿದ್ದು ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ನೀಡುವ ವಿಚಾರ ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಅಲ್ಲದೇ ಅಲ್ಪಸಂಖ್ಯಾತ ಇಲಾಖೆಯಿಂದಲೇ ಈ ಬಗ್ಗೆ ಅಂತಿಮ ತೀರ್ಮಾನ ಆಗಲಿ ಎಂದು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಅಲ್ಲದೇ ಈ ಪ್ರಸ್ತಾಪವನ್ನು ಅಲ್ಪಸಂಖ್ಯಾತರ ವ್ಯವೆಹಾರಗಳ ಇಲಾಖೆಗೆ ಕರ್ನಾಟಕ ಸರ್ಕಾರ ಮಾಡಿರುವ ಶಿಫಾರಸ್ಸನ್ನು ವರ್ಗಾಯಿಸಲಾಗಿದೆ. ಇದಲ್ಲದೇ ನೀತಿ ಸಂಹಿತೆ ಮುಗಿಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳದಿರಲು ನಿರ್ಧರಿಸಲಾಗಿರೋದರಿಂದ ಚುನಾವಣೆ ಮುಗಿಯುವರೆಗೂ ಯಾವುದೇ ಬೆಳವಣಿಗೆಯಾಗೋದು ಅನುಮಾನವಾಗಿದೆ.