ಸಚಿವೆ ಉಮಾಶ್ರೀ ಭರ್ಜರಿ ಡ್ಯಾನ್ಸ್!!

ಇಂದು‌ ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ಬಾಲಭವನದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ತುಂಬಾ ವಿಶಿಷ್ಟವಾಗಿತ್ತು. ಯಾಕಂದ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಕ್ಕಳ ಜೊತೆ ಸಖತ್ ಸ್ಟೆಪ್ ಹಾಕಿ ಕುಣಿದು ಸಂಭ್ರಮಿಸಿದ್ರು.

ad


ಹೌದು ಬಾಲಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಸಚಿವೆ ಉಮಾಶ್ರೀ ತಮಟೆ ಸದ್ದಿಗೆ ಫುಲ್‌ಡ್ಯಾನ್ಸ್ ಮಾಡಿದರು. ಅಷ್ಟೇ ಅಲ್ಲ ವಿವಿಧ ರೀತಿಯ ಸ್ಥಬ್ಧ ಚಿತ್ರಗಳು ಹಾಗು ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಮಕ್ಕಳೊಂದಿಗೂ ಕುಣಿದು ತಾವು ಮಕ್ಕಳಂತೆ ಎಂಜಾಯ್ ಮಾಡಿದರು‌. ಸಚಿವೆ ಉಮಾಶ್ರೀ ಯವರಿಗೆ ಬಾಲಭವನದ ಅಧ್ಯಕ್ಷೆ ಅಂಜಲಿ ನಿಂಬಾಳ್ಕರ್ ಸಾಥ್ ನೀಡಿದರು.

ಇದಕ್ಕೂ ಮೊದಲು ನಡೆದ ಸಭಾಕಾರ್ಯಕ್ರಮಕ್ಕೆ ರಾಜ್ಯಪಾಲ ವಜೂಬಾಯಿ ವಾಲಾ ಚಾಲನೆ ನೀಡಿದರು. ಇದೇ ವೇಳೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತ್ಯಂತ ತುರ್ತು ಸ್ಥಿತಿಯಲ್ಲಿ ಶೌರ್ಯ ಮೆರೆದು ಬೇರೆಯವರ ಪ್ರಾಣ ರಕ್ಷಿಸಿದ ೭  ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ರಾಜ್ಯದ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು. ಎಲ್ಲದರ ನಡುವೆ ಉಮಾಶ್ರಿ ಡ್ಯಾನ್ಸ್ ಎಲ್ಲರ ಮನಸೆಳೆದಿದೆ.