ಕೋಟೆನಾಡಿನಲ್ಲಿ ತಿಪ್ಪಾರೆಡ್ಡಿ- ವಿರೇಂದ್ರ ವಾಕ್ಸಮರ!

Talk Fight Between MLA GH Thippareddy &KC.Veerendra puppy.
Talk Fight Between MLA GH Thippareddy &KC.Veerendra puppy.

ಚುನಾವಣೆ ಎದುರಾಗುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳು ಸಾಮಾನ್ಯ. ಇದಕ್ಕೆ ಕೋಟೆನಾಡು ಚಿತ್ರದುರ್ಗ ಕೂಡ ಹೊರತಲ್ಲ.

ad


ಮತಯಾಚನೆಗೆ ಜನತೆಯ ಮುಂದೆ ನಿಂತಿರುವ ರಾಜಕೀಯ ನಾಯಕರು ಒಬ್ಬರ ಮೇಲೊಬ್ಬರು ಟೀಕಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂಧಾಗಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹಾಗೂ ಜೆಡಿಎಸ್ ಅಭ್ಯರ್ಥಿ ವೀರೇಂದ್ರ ಪಪ್ಪಿ ಪರಸ್ಪರ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದಾರೆ. ಗೋವಾ, ಶ್ರೀಲಂಕಾಗಳಲ್ಲಿ ಕ್ಯಾಸಿನೋ ನಡೆಸುತ್ತಿರುವ ಕೆ.ಸಿ.ವೀರೇಂದ್ರರನ್ನು ಜೂಜುಕೋರ ಅಂತ ಶಾಸಕ ತಿಪ್ಪಾರೆಡ್ಡಿ ಕಾರ್ಯಕ್ರಮವೊಂದರಲ್ಲಿ ಟೀಕಿಸಿದ್ದರು.

 

 

ಇದರಿಂದ ಜೆಡಿಎಸ್​ ಅಭ್ಯರ್ಥಿ ವೀರೇಂದ್ರ ಪಪ್ಪಿ ಸಾಕಷ್ಟು ಮುಜುಗರ ಎದುರಿಸುವಂತಾಗಿತ್ತು. ಇದೀಗ ಶಾಸಕರನ್ನು ಕಟುವಾಗಿ ಟೀಕಿಸಿರುವ ವಿರೇಂದ್ರ ಅವರು, ತಿಪ್ಪಾರೆಡ್ಡಿ ಮನೆಗಳನ್ನು ಹಾಳು ಮಾಡಿ ಹಣ ತಂದು ರಾಜಕೀಯ ಮಾಡುತ್ತಿದ್ದಾರೆ ಅಂತಾ ಶಾಸಕರಿಗೆ ತಿರುಗೇಟು ನೀಡಿದ್ದಾರೆ.  ಇದೀಗ ಈ ಎರಡು ವಿಡಿಯೋಗಳು ಸಖತ್ ವೈರಲ್​ ಆಗಿದ್ದು, ರಾಜಕಾರಣಿಗಳ ಒಳಜಗಳದಿಂದ ಸಾರ್ವಜನಿಕರು ಸಖತ್​​ ಎಂಟರಟೇನ್ಮೆಂಟ್​​ ಪಡಿತಾ ಇರೋದಂತು ಸುಳ್ಳಲ್ಲ.