ಟಿಪ್ಪು ಜಯಂತಿಯಲ್ಲಿ ಕತ್ತಿ ಹಿಡಿದು ಕುಣಿದ ಎಮ್.ಎಲ್.ಎ

ನಿನ್ನೆ ನಾಡಿದ್ಯಾಂತ ಬಿಜೆಪಿ ವಿರೋಧದ ನಡುವೆಯೂ ಸರ್ಕಾರ ಟಿಪ್ಪು ಜಯಂತಿ ಆಚರಿಸುವಲ್ಲಿ ಯಶಸ್ವಿಯಾಗಿದೆ. ಹಲವೆಡೆ ಸಣ್ಣ-ಪುಟ್ಟ ಅವಘಡದ ನಡೆದಿದ್ದರೇ ಕಾಂಗ್ರೆಸ್​ ಶಾಸಕರು ಮಾತ್ರ ಟಿಪ್ಪು ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ ಸಂಭ್ರಮಿಸಿದ್ದಾರೆ.  ಈ ಮಧ್ಯೆ ಕಾಂಗ್ರೆಸ್​ ಶಾಸಕ ಸಿ.ಎಸ್.ಶಿವಳ್ಳಿ ಧಾರವಾಡದಲ್ಲಿ ಸಖತ್ತಾಗಿ ಟಿಪ್ಪು ಜಯಂತಿ ಆಚರಿಸಿ ಸುದ್ದಿಯಾಗಿದ್ದಾರೆ. ಹೌದು ಶಾಸಕ ಶಿವಳ್ಳಿ ನಿನ್ನೆ ಟಿಪ್ಪುವೇ ಮೈಮೇಲೆ ಬಂದಂತೆ ಕುಣಿದಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ನಿನ್ನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಭವನವೊಂದರಲ್ಲಿ ಟಿಪ್ಪು ಜಯಂತಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ  ಸಿ ಎಸ್ ಶಿವಳ್ಳಿ ತಲೆಗೆ ಟಿಪ್ಪು ಪೇಟಾ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಸಖತ್ತಾಗಿ ಸ್ಟೆಪ್ ಹಾಕಿದ್ದು,  ವೇದಿಕೆ ತುಂಬಾ ಕುಣಿದಾಡಿದ್ದಾರೆ. ಸಿಎಂ ಸಂಸದೀಯ ಕಾರ್ಯದರ್ಶಿ ಶಿವಳ್ಳಿಯವರ ಈ ಕತ್ತಿ ಕುಣಿತಕ್ಕೆ ವೇದಿಕೆಯಲ್ಲಿದ್ದ ಎಲ್ಲರೂ ಸಾಥ್​ ನೀಡಿದ್ದಾರೆ. ಹೀಗಾಗಿ ಈ ಕುಣಿತದ ವಿಡಿಯೋ ಸಖತ್ ವೈರಲ್ ಆಗಿದೆ.