ರಾಯಚೂರಿನಲ್ಲಿ ಕಾಂಗ್ರೆಸ್ ಗೆಲುವಿಗೆ ಸಿಎಂ ಆಪ್ತರೇ ಅಡ್ಡಿ- ಪಕ್ಷೇತರರಾಗಿ ಕಣಕ್ಕಿಳಿತಾರೆ ಡಾ.ತನುಶ್ರೀ!

MA Eranna's daughter-in-law Will Oppositely elected by Congress Party.
MA Eranna's daughter-in-law Will Oppositely elected by Congress Party.

ಒಂದೆಡೆ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷದಲ್ಲೇ ಬಂಡಾಯದ ಬಿಸಿ ಹೆಚ್ಚುತ್ತಿದ್ದರೇ ಇತ್ತ ಕಾಂಗ್ರೆಸ್​​ ಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಆಪ್ತರೇ ಮುಳುವಾಗುವ ಮುನ್ಸೂಚನೆ ಲಭ್ಯವಾಗಿದೆ.

ad

ಹೌದು ಮುಖ್ಯಮಂತ್ರಿ ಆಪ್ತರೊಬ್ಬರು ಕಾಂಗ್ರೆಸ್ ವಿರುದ್ಧವೇ ತಮ್ಮ ಸೊಸೆಯನ್ನು ನಿಲ್ಲಿಸಲು ಮುಂಧಾಗಿದ್ದು, ಕಾಂಗ್ರೆಸ್​​ಗೆ ಮಗ್ಗುಲ ಮುಳ್ಳುವಾಗುವ ಸಾಧ್ಯತೆ ಇದೆ. ರಾಯಚೂರಿನ ಕುರುಬ ಸಮಾಜದ ಎಂ. ಈರಣ್ಣ ಸಿಎಂ ಸಿದ್ದರಾಮಯ್ಯ ಪರಮಾಪ್ತರು. ಇದೀಗ ಎಂ.ಈರಣ್ಣನವರ ಸೊಸೆ ಡಾ.ತನುಶ್ರೀ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಡಾ.ತನುಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯಲಿದ್ದಾರೆ. ಪರಿಶಿಷ್ಟ ಪಂಗಡದರಾಗಿರುವ ಗೊಂಡ ಕುರುಬ ಸಮಾಜದ ಡಾ.ತನುಶ್ರೀ. ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಎಂ ಈರಣ್ಣ ಅವರ ಮಗ ಪ್ರವೀಣ ಅವರನ್ನು ಮದುವೆ ಆಗಿದ್ದರು.

ಬಳಿಕ ಡಾ.ತನುಶ್ರೀ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಕೇಳಿದ್ದರು, ಟಿಕೇಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಪಕ್ಷೇತರವಾಗಿ ಸ್ಪರ್ದೆ ಮಾಡಲಿದ್ದಾರೆ. ಇದರಿಂದ ಎರಡು ದಶಕಗಳ ಕಾಲ ನಡೆದ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಎರಡು ಭಾರಿ ಹಂಪಯ್ಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೇ ಈ ಭಾರಿ ಆಯ್ಕೆ ಕಠಿಣ ಎನ್ನಲಾಗುತ್ತಿದೆ. ಇನ್ನು ಜೆಡಿಎಸ್​ನಿಂದ ನಾಯಕ ಜನಾಂಗದ ರಾಜಾ ವೆಂಕಟಪ್ಪ ನಾಯಕ ಕಣಕ್ಕಿಳಿಯಲಿದ್ದು, ಕುರುಬ, ಲಿಂಗಾಯತ್ ಮತ ಪಡೆದು ಡಾ.ತನುಶ್ರೀ ಗೆಲ್ಲುವ ಸಾಧ್ಯತೆ ಹೆಚ್ಚಿದೆ.