ಅಯ್ಯೋ.. ಅಲ್ಲಾಡ್ಸ್ ಅಲ್ಲಾಡ್ಸ್​ ಅಂತ ಡ್ಯಾನ್ಸ್​ ಮಾಡಿದ್ದು ಸಿಎಂ ಅಲ್ವಾ? ಹಾಗಾದ್ರೆ ಮತ್ಯಾರು?

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯನವರು ಅಲ್ಲಾಡ್ಸ್​ ಅಲ್ಲಾಡ್ಸ್​ ಹಾಡಿಗೆ ನೃತ್ಯ ಮಾತಾಡಿದ್ದು, ಸಖತ್​ ವೈರಲ್​ ಆಗಿದ್ದು ಸಾರ್ವತ್ರಿಕವಾಗಿ ಟೀಕೆಗೆ ಗುರಿಯಾಗಿತ್ತು.

ಬಿಜೆಪಿ ಬೆಂಬಲಿಗರು ತಮ್ಮ ಪೇಸ್​ಬುಕ್​​ಗಳಲ್ಲಿ ಈ ದೃಶ್ಯಾವಳಿ ಶೇರ್ ಮಾಡಿಕೊಂಡು ಮನಬಂದಂತೆ ಟೀಕಿಸಿದ್ದರು. ಇಷ್ಟಕ್ಕೂ ಆ ದೃಶ್ಯದಲ್ಲಿ ಇರೋದು ನಿಜವಾಗಿಯೂ ಸಿಎಂ ಸಿದ್ದರಾಮಯ್ಯನವರಾ? ಎಂಬ ಚರ್ಚೆ ಆರಂಭವಾಗಿತ್ತು. ಇದೀಗ ಈ ಸಂದೇಹಕ್ಕೆ ಉತ್ತರಸಿಕ್ಕಿದ್ದು, ಅದು ಸಿಎಂ ಸಿದ್ದರಾಮಯ್ಯ ಅಲ್ಲ ಎಂಬುದು ಸಾಬೀತಾಗಿದೆ.
ಸಾರ್ವಜನಿಕ ಸ್ಥಳವೊಂದರಲ್ಲಿ ಬಿಳಿ ಪಂಜೆ-ಶರ್ಟ್​ ತೊಟ್ಟು ಸಿಎಂ ಸಿದ್ದರಾಮಯ್ಯ ಅಲ್ಲಾಡ್ಸ್ ಅಲ್ಲಾಡ್ಸ್ ಎಂಬ ನೃತ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಆದರೇ ಇದೀಗ ಬಹಿರಂಗವಾದ ಅಂಶ ಅಚ್ಚರಿತಂದಿದ್ದು, ನೃತ್ಯ ಮಾಡಿರೋದು ಸಿಎಂ ಸಿದ್ದರಾಮಯ್ಯ ಅಲ್ಲ. ಬದಲಾಗಿ ರೈತ ಚೆನ್ನಮಹಹಾಗೌಡ್​.
ಹೌದು ಇತ್ತೀಚಿಗೆ ನಡೆದಿದ್ದ ಸಿರಿಧ್ಯಾನ ಮೇಳದಲ್ಲಿ ರೈತ ಚೆನ್ನಮಹಾಗೌಡ್ ಸಿಎಂ ಸಿದ್ದರಾಮಯ್ಯನವರಂತೆ ವೈಟ್​- ಆಂಡ್​ ವೈಟ್​ ಬಟ್ಟೆ ಹಾಕಿ ಡ್ಯಾನ್ಸ್​ ಮಾಡಿದ್ದರು. ಈ ದೃಶ್ಯಾವಳಿಯನ್ನು ಸ್ಥಳೀಯರೆಲ್ಲರೂ ವಿಡಿಯೋ ರೇಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು. ಇದನ್ನು ಸಿಎಂ ಸಿದ್ದರಾಮಯ್ಯ ಎಂದು ಬಿಂಬಿಸಿದ್ದ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಶೇರ್ ಮಾಡಿ ಸಿಎಂ ಸಿದ್ದು ಎಂದು ಅಪಪ್ರಚಾರ ಮಾಡಿದ್ದರು. ಇದೀಗ ಅದು ಚೆನ್ನ ಮಹಾಗೌಡ್​ ಎಂಬುದು ಸಾಬೀತಾಗಿದೆ.