ಸಂವಿಧಾನ ಮೊದಲು ಹುಟ್ಟಿದ್ದೋ ಅನಂತಕುಮಾರ್ ಹೆಗಡೆ ಮೊದಲು ಹುಟ್ಟಿದ್ದೋ? – ಕೇಂದ್ರ ಸಚಿವ ಹೆಗಡೆ ವಿರುದ್ಧ ಸಿಎಂ ಕಿಡಿ!!

CM Outrage against Anant Kumar Hegde's Statement.
CM Outrage against Anant Kumar Hegde's Statement.

ನಾವು ಸಂವಿಧಾನ ಬದಲಾಯಿಸುತ್ತೇವೆ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಅನಂತಕುಮಾರ್ ಹೆಗಡೆ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಸಂವಿಧಾನ ಮೊದಲು ಹುಟ್ಟಿದ್ದೋ, ಅನಂತ ಕುಮಾರ್ ಹೆಗಡೆ ಮೊದಲು ಹುಟ್ಟಿದ್ದೋ ಅಂತ ಹರಿಹಾಯ್ದಿದ್ದಾರೆ. ಅನಂತ್ ಕುಮಾರ್ ಹೆಗಡೆಗೆ ಸಂವಿಧಾನ ಗೊತ್ತಿಲ್ಲ.

ad


ಸಾಮಾಜಿಕ ಕಳಕಳಿಯೂ ಇಲ್ಲ. ಇಂತಹವರು ಸಂವಿಧಾನ ಬದಲಿಸಲು ಹೊರಟಿದ್ದಾರೆ ಅಂತ ಕಿಡಿ ಕಾರಿದ್ರು.
ನಮ್ಮದು ಧರ್ಮ ನಿರಪೇಕ್ಷ ರಾಷ್ಟ್ರ. ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡೋದು ನಮ್ಮ ಗುರಿ ಅಂತ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ರು. ಇನ್ನು ಬೆಂಗಳೂರಿನಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಅನಂತಕುಮಾರ್ ಹೆಗಡೆ ಮಾತಿನಿಂದ ಅವರ ಪಕ್ಷದ ಸಿದ್ಧಾಂತ ಹೊರಬಂದಿದೆ.ಜಾತ್ಯಾತೀಯವಾದಿಗಳಿಗೆ ಅಪ್ಪ ಅಮ್ಮ ಇಲ್ಲ ಅಂದಿದ್ದಾರೆ. ಅವರಿಗೆ ಅಸ್ತಿತ್ವವೇ ಇಲ್ಲವೆಂದಿದ್ದಾರೆ. ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡನೀಯ ಎಂದರು.

 

ಅಲ್ಲದೇ, ಅನಂತಕುಮಾರ್ ಹೆಗಡೆ ದೇಶದ ಸಂವಿಧಾನದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.ದೇಶದ ಐಕ್ಯತೆ ಸಮಗ್ರತೆಗೆ ಧಕ್ಕೆ ತಂದಿದ್ದಾರೆ. ಅವರ ಅಜೆಂಡಾ ಗಲಬೆ,ಹಿಂಸೆ ಎಬ್ಬಿಸುವುದೇ ಆಗಿದೆ. ಹೆಗಡೆಯನ್ನ ಮಂತ್ರಿಮಾಡಿರುವುದೇ ಶೋಚನೀಯ.ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದಿದ್ದಾರೆನಮ್ಮ ಸಂವಿಧಾನದಿಂದ ನಮ್ಮ ದೇಶಕ್ಕೆ ಉತ್ತಮ ಗೌರವವಿದೆ.ಸಂವಿಧಾನವನ್ನೇ ಧಿಕ್ಕಿರಿಸುವ ಕೆಲಸ ಹೆಗಡೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟೀಮಾಡುವುದೇ ಇವರ ಕೆಲಸವಾಗಿದೆ ಹೆಗಡೆ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಇನ್ನು ಕೊಪ್ಪಳದಲ್ಲಿ ಅನಂತಕುಮಾರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅನಂತಕುಮಾರ್ ಹೆಗಡೆಯ ಭಾವಚಿತ್ರಕ್ಕೆ ಒದ್ದು, ಶತಮಾನದ ಮಾಹಾಮೂರ್ಖ ಅನಂತಕುಮಾರ್. ದಲಿತ ವಿರೋಧಿ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ ಎಂದು ಕಾಂಗ್ರೆಸ್​ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ರು. ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅನಂತಕಮಾರ್​ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಅನಂತಕುಮಾರ್ ಹೆಗಡೆ ಹೊಸ ವಿವಾದ ಹುಟ್ಟುಹಾಕಿದ್ದು ಪರ-ವಿರೋಧದ ಚರ್ಚೆ ಜೋರಾಗಿದೆ.