ಪರಂ-ಸಿದ್ದು ನಡುವೆ ಮುನಿಸಿಲ್ಲ- ಆದರೇ ಪರಂ ಜನಾರ್ಶೀವಾದ ಯಾತ್ರೆಗೆ ಬರಲ್ಲ- ವೇಣುಗೋಪಾಲ ಸ್ಪಷ್ಟನೆ!!

CM -Parameshwar dissension Issue: Congress in-charge KC Venugopal Reacts to Media.
CM -Parameshwar dissension Issue: Congress in-charge KC Venugopal Reacts to Media.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​​ನಲ್ಲಿ ಮುನಿಸುಗಳು ಗರಿಗೆದರುತ್ತಿವೆ. ಸಿಎಂ ಸಿದ್ದು- ಪಕ್ಷದ ಅಧ್ಯಕ್ಷ ಪರಮೇಶ್ವರ್​​ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಲೇ ಇದೆ. ಇನ್ನು ಈ ವಿಷಯದ ಕುರಿತು

ಕಾಂಗ್ರೆಸ್​ ರಾಜ್ಯ ಉಸ್ತುವಾರಿ ವೇಣುಗೋಪಾಲ್​​ ಪ್ರತಿಕ್ರಿಯೆ ನೀಡಿದ್ದು, ಪರಮೇಶ್ವರ್ ಮತ್ತು ಸಿಎಂ ನಡುವೆ ಮನಸ್ತಾಪ ಇಲ್ಲ. ದೆಹಲಿಯಿಂದ ಎಲ್ಲರೂ ಒಟ್ಟಿಗೆ ಬಂದಿದ್ದೇವೆ. ಸಣ್ಣ-ಪುಟ್ಟ ಸಮಸ್ಯೆ ಇದ್ದೇ ಇರುತ್ತವೆ, ಅವೆಲ್ಲಾ ಸಾಮಾನ್ಯ ಎಂದಿದ್ದಾರೆ.

 

ಅಲ್ಲದೇ ರಾಜ್ಯ ಸರ್ಕಾರದಿಂದ ಮಾಡುವ ಜನಾರ್ಶೀವಾದ ಯಾತ್ರೆಗೆ ಪರಮೇಶ್ವರ್​ ಹೋಗುವುದಿಲ್ಲ. ಕೇವಲ ಸಿಎಂ ಸಿದ್ದರಾಮಯ್ಯ ಮಾತ್ರ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. 3 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುವ ಕೆಪಿಸಿಸಿ ಸಭೆಗೆ ಆಗಮಿಸಿರುವ ವೇಣುಗೋಪಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಕಾಂಗ್ರೆಸ್​​ನ ಜನಾಶೀರ್ವಾದ ಯಾತ್ರೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಸದ್ಯಕ್ಕೆ ಜನಾಶೀರ್ವಾದ ಯಾತ್ರೆ ನಡೆಸಲ್ಲ. ಮಾರ್ಚ್ ಒಂದರಿಂದ ಯಾತ್ರೆ ಮಾಡುತ್ತೇನೆ. ಸದ್ಯ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೋಗುತ್ತೇನೆ ಅಂದ್ರು. ಒಟ್ಟಿನಲ್ಲಿ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಎಂಬುದನ್ನು ಬಿಂಬಿಸಲು ಪಕ್ಷದ ನಾಯಕರು ಸರ್ಕಸ್​ ನಡೆಸಿರೋದಂತು ಸತ್ಯ.