ಮೇಯರ್ ಕವಿತಾ ಹೊಟ್ಟೆಗೆ ಸಿಎಂ ಸಖತ್ ಪಂಚ್!!

ಸಿಎಂ ಸಿದ್ದರಾಮಯ್ಯನವರಿಗೆ ಆಡಳಿತ ಮಾಡೋದು ಗೊತ್ತು, ಭಾಷಣ,ಪಾಠ ಮಾಡೋದರಲ್ಲೂ ಸಿದ್ಧಹಸ್ತರು. ಆದರೇ ಸಿಎಂ ಸಿದ್ದರಾಮಯ್ಯನವರಿಗೆ ಕರಾಟೆನೂ ಬರುತ್ತಾ? ಈ ವಿಡಿಯೋ ನೋಡಿದ ಮೇಲೆ ನಿಮಗೂ ಇಂತಹುದೇ ಅನುಮಾನ ಬರಬಹುದು. ಹೌದು ಸಿಎಂ ಸಿದ್ಧರಾಮಯ್ಯ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್​ ಶಿಪ್​​ಗೆ ಚಾಲನೆ ನೀಡುವ ವೇಳೆ ಮೇಯರ್​ ಕವಿತಾಗೆ ಸಖತ್ ಪಂಚ್ ನೀಡಿದ್ದಾರೆ.


ಹೌದು ಕರಾಟೆ ಚಾಂಪಿಯನ್ ಶಿಪ್ ಉದ್ಘಾಟನೆ ವೇಳೆ ಮೇಯರ್ ಕವಿತಾ ತಮಾಷೆಯಾಗಿ ಸಿಎಂ ಸಿದ್ದರಾಮಯ್ಯ ಹೊಟ್ಟೆಗೆ ಒಂದು ಪಂಚ್​ ನೀಡಿದರು. ಮರುಕ್ಷಣವೇ ಸಿಎಂ ಸಿದ್ದರಾಮಯ್ಯ ಮೇಯರ್ ಕವಿತಾ ಹೊಟ್ಟೆಗೆ ಪ್ರತಿ ಪಂಚ್​ ನೀಡಿದರು. ಇದು ವೇದಿಕೆಯಲ್ಲಿ ದ್ದವರನ್ನು ನಗೆಗಡಲಿನಲ್ಲಿ ತೇಲಿಸಿತು.


ಎರಡು ದಿನಗಳ ಕಾಲ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಈ ಕರಾಟೆ ಚಾಂಪಿಯನ್​ ಶಿಪ್​ಗೆ ಸಿಎಂ ಚಾಲನೆ ನೀಡಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಕೈಕುಲುಕಿ ಶುಭಹಾರೈಸಿದರು. ಚಾಲನೆ ವೇಳೆ ಸಿಎಂ ಪಂಚ್​ ನೀಡಿದ್ದೇ ಕಾರ್ಯಕ್ರಮದ ಹೈಲೈಟ್​ ಆಗಿದ್ದು, ಸಿಎಂ ಪಂಚಿಂಗ್​ ವಿಡಿಯೋ ಸಖತ್​ ವೈರಲ್​ ಆಗಿದೆ.