ಓವೈಸಿ-ಬಿಜೆಪಿ ಮೈತ್ರಿಯಾಗುತ್ತಾ? – ಈ ಮೈತ್ರಿ ಗಾಸಿಪ್​​ಗೆ ಸಿಎಂ ಏನಂದ್ರು ಗೊತ್ತಾ?

CM Siddaramiah Criticizing on OYC and BJP Alliance

ಹೈದ್ರಾಬಾದ್​ನಲ್ಲಿ ಓವೈಸಿ ಪಕ್ಷದವರ ಜೊತೆ ಬಿಜೆಪಿ ನಾಯಕರು ನಡೆಸಿದ್ದಾರೆ ಎನ್ನಲಾದ ಮಾತುಕತೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಈ ಮಾತುಕತೆ ಕುರಿತು ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಸಮಾಜವನ್ನು ಒಡೆಯುವ ಕಾಯಕ ಮಾಡಿಕೊಂಡಿರುವವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡ್ರೆ ಸಮಾಜದ ಗತಿ ಎನು ಎಂದು ಪ್ರಶ್ನಿಸಿದ್ದಾರೆ. ಹೌದು ಹೈದ್ರಾಬಾದಿನಲ್ಲಿ ಓವೈಸಿ ಜೊತೆ ಬಿಜೆಪಿ ನಾಯಕರು ನಡೆಸಿರುವ ಮಾತುಕತೆಗೆ ಸಿಎಂ ಕಟುವಾಗಿ ಪ್ರತಿಕ್ರಿಯಿಸಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲೂ ಹೀಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಬ್ಬರು ಸಮಾಜ ಒಡೆಯುವವರೇ ಒಂದೆಡೆ ಸೇರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಈ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಹೈದ್ರಾಬಾದ್ ನಲ್ಲಿ ಬಿಜೆಪಿ ನಾಯಕರು ಓವೈಸಿ ಜೊತೆ ಗುಪ್ತ ಸಭೆ ನಡೆಸಿದ್ದಾರೆ. ಚುನಾವಣಾ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿಯವರು ಯಾವ ಮಾರ್ಗ ಬೇಕಾದರೂ ಹಿಡಿಯುತ್ತಾರೆ. ಇದು ಬಿಜೆಪಿಗೆ ಹೊಸದೇನು ಅಲ್ಲಾ.

 

 

ಉತ್ತರ ಪ್ರದೇಶದಲ್ಲಿಯೂ ಹೀಗೆ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಕರ್ನಾಟಕದಲ್ಲೂ ಅದೇ ತಂತ್ರವನ್ನ ಅನುಸರಿಸ್ತಿದ್ದಾರೆ ಎಂದರು. ಓವೈಸಿ ಜೊತೆ ಬಿಜೆಪಿ ಹೊಂದಾಣಿಕೆ ವಿಚಾರಕ್ಕೆ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮ್ಮದ್ ತೀವ್ರವಾಗಿ ಟೀಕಿಸಿದ್ದು, ರಾಜ್ಯಕ್ಕೆ ಯಾವ ಓವೈಸಿ ಬಂದ್ರೂ ಏನೂ ಮಾಡೋಕೆ ಆಗೋದಿಲ್ಲಾ. ಕರ್ನಾಟಕದ ಮುಸ್ಲಿಂರು ತುಂಬಾ ಬುದ್ಧಿವಂತರು. ಬಿಜೆಪಿಯ ಇಂತಹ ತಂತ್ರಗಳನ್ನ ಚನ್ನಾಗಿಯೇ ಅರಿತಿದ್ದಾರೆ. ನಾನು ಜೆಡಿಎಸ್ ನಲ್ಲಿ ಇದ್ದಾಗ ಮುಸ್ಲಿಂ ಮತಗಳನ್ನ ಪಡೆಯುವುದು ಕಷ್ಟವಾಗಿತ್ತು. ಆದ್ರೆ ಕಾಂಗ್ರೆಸ್ ನಲ್ಲಿ ಅಂತಹ ವಾತಾವರಣವಿಲ್ಲಾ. ಎಲ್ಲಾ ಮುಸ್ಲಿಂರು ಕಾಂಗ್ರೆಸ್ ನ್ನ ಬೆಂಬಲಿಸಲಿದ್ದಾರೆ ಎಂದರು. ಒಟ್ಟಿನಲ್ಲಿ ಬಿಜೆಪಿ ಮತ್ತು ಓವೈಸಿ ನಾಯಕರ ಮಾತುಕತೆ ತೀವ್ರ ಕುತೂಹಲ ಮೂಡಿಸಿದ್ದು, ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.