ಎಚ್ ವೈ ಮೇಟಿ “ಕ್ರಿಯಾಶೀಲತೆ”ಗೆ ಮಾರು ಹೋದ ಸಿದ್ದರಾಮಯ್ಯ !! ಕಾಮ ಗಾರಿಗೆ ಸಿಎಂ ಫಿದಾ !!

CM Siddhu speech at Bagalkote various development works
CM Siddhu speech at Bagalkote various development works

ಸೆಕ್ಸ್ ಸಿಡಿ ಮೂಲಕ ಸುದ್ದಿಯಾಗಿ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಕೊನೆಗೆ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದ ಶಾಸಕ ಎಚ್ ವೈ ಮೇಟಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸಾರೆ ಹೊಗಳಿದರು.

ಬಾಗಲಕೋಟೆಯಲ್ಲಿ ಶಾಸಕ ಎಚ್ ವೈ ಮೇಟಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಮೇಟಿ ಒಬ್ಬ ಕ್ರಿಯಾಶೀಲ  ರಾಜಕಾರಣಿ,ಈ ಹಿಂದೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಗೆದ್ದಿರಲಿಲ್ಲ. ಆದ್ರೆ ಹಿಂದಿನ ಚುನಾವಣೆಯಲ್ಲಿ ಮೇಟಿ ಗೆಲುವು ಸಾಧಿಸುವುದರ ಮೂಲಕ ಕಾಂಗ್ರೆಸ್ ಗೆ ಇದ್ದ ಶಾಪ ವಿಮೋಚನೆ ಮಾಡಿಸಿದ್ದಾರೆ ಎಂದರು.

 

“ಈಗಾಗಲೇ ಚುನಾವಣಾ ಪ್ರಚಾರ ಶುರುವಾಗಿದೆ. ಸೂರ್ಯ ಹುಟ್ಟುವುದು ಎಷ್ಟು ಸತ್ಯಾನೋ,ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನಮ್ಮ ಸರ್ಕಾರ ವಿರುದ್ಧ ಯಾವುದೇ ರೀತಿಯ ವಿರೋದಿ ಅಲೆ ಇಲ್ಲ. ನಾವು ಜನಪರ ಪಾರದರ್ಶಕ ಆಡಳಿತ ಕೊಟ್ಟಿದ್ದೇವೆ. ಸರ್ಕಾರದ ಪರ ಅಲೆ ಎಲ್ಲ ಕಡೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.