ಸಿಎಂ ಪುತ್ರನ ಮೇಲೆ ನೀತಿಸಂಹಿತೆ ಉಲ್ಲಂಘನೆ ಆರೋಪ!

CM Son's Yatindra Campaigned for Temple Premises.

ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗುತ್ತಿದ್ದಂತೆ ರಾಜ್ಯದಾದ್ಯಂತ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಇದೀಗ ಈ ಆರೋಪ ಸಿಎಂ ಪುತ್ರ ಡಾ.ಯತೀಂದ್ರ ಮೇಲೂ ಕೇಳಿಬಂದಿದೆ.

ಹೌದು ಸಿಎಂ ಪುತ್ರ ಡಾ.ಯತೀಂದ್ರ ದೇವಾಲಯದ ಆವರಣದಲ್ಲಿ ಪ್ರಚಾರ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ದೇವಾಲಯ ಹಾಗೂ ಶಾಲೆಯ ಆವರಣದಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಆದರೇ ಯತೀಂದ್ರ ಜನತಾನಗರದ ಶ್ರೀಶನಿಶ್ವರ ದೇವಾಲಯದಲ್ಲಿ ಡಾ.ಯತೀಂದ್ರ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿರುವ ಜೆಡಿಎಸ್​ ಆಗ್ರಹಿಸಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಪುತ್ರ ಡಾ.ಯತೀಂದ್ರ ಮೈಸೂರಿನಲ್ಲಿ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಆದರೇ ಪ್ರಚಾರದ ಆರಂಭದಲ್ಲೇ ಸಿಎಂಪುತ್ರನ ಮೇಲೆ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಕೇಳಿಬಂದಿದ್ದು, ಚುನಾವಣಾ ಆಯೋಗ ಏನು ಕ್ರಮಕೈಗೊಳ್ಳುತ್ತೆ ಕಾದು ನೋಡಬೇಕಿದೆ.

Avail Great Discounts on Amazon Today click here