ರಾಮಭಕ್ತ ಹನುಮನಿಗೂ ತಟ್ಟಿದ ಎಲೆಕ್ಷನ್ ಬಿಸಿ- ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಸಾದಕ್ಕೂ ಬಿತ್ತು ಬ್ರೇಕ್!

Code of Conduct: Anjaneya Devotees Got a Election rule
Code of Conduct: Anjaneya Devotees Got a Election rule

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜಾರಿ ಮಾಡಿರುವ ನೀತಿ ಸಂಹಿತೆಯ ಬಿಸಿ ರಾಮಭಕ್ತ ಭಕ್ತ ಹನುಮಪ್ಪನಿಗೂ ತಟ್ಟಿದೆ.

ad

ಹೌದು ಇಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಪ್ರತೀವರ್ಷ ಆಂಜನೇಯನಿಗೆ ವಿಶೇಷ ಪೂಜೆಸಲ್ಲಿಸಿ ಭಕ್ತರು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು.ಸದ್ಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಾಗಲಕೋಟೆ ನಗರದ ಹಲವು ಆಂಜನೇಯನ ದೇವಸ್ಥಾನಗಳಲ್ಲಿ ಏರ್ಪಡಿಸುತ್ತಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಆಯೋಗ ಬ್ರೇಕ್​​ ಹಾಕಿದೆ.
ಹೀಗಾಗಿ ಹನುಮನಿಗೆ ಪೂಜೆ ಸಲ್ಲಿಸಿ ಪ್ರಸಾದ ತಿಂದು ಕೃತಾರ್ಥರಾಗುವ ಭಕ್ತರ ಕನಸು ಕನಸಾಗಿಯೇ ಉಳಿದುಕೊಂಡಿದೆ.

ಇನ್ನು ಪೂರ್ವಾನುಮತಿ ಪಡೆಯದೇ ಇದ್ದಿದ್ದರಿಂದ ಕೇವಲ ಧಾರ್ಮಿಕ ಕಾರ್ಯಕ್ರಮಗಳು,ವಿಶೇಷ ಪೂಜೆಗಳಿಗೆ ಅವಕಾಶ ಕಲ್ಪಿಸಲಾಗಿದೆ.ದೇವಸ್ಥಾನಗಳಲ್ಲಿ ನೀಡುವ ಅಭಿಷೇಕ,ತಿರ್ಥಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.
ಆದ್ರೆ ವಿಶೇಷ ದಿನಗಳಂದು ಏರ್ಪಡಿಸುತ್ತಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ರದ್ದಾಗಿದ್ದು ಹನುಮ ಭಕ್ತರಲ್ಲಿ ನಿರಾಸೆ ಮೂಡಿದೆ.ಕೇವಲ.ಪೂಜೆ ಪುನಸ್ಕಾರಗಳಿಗೆ ಭಕ್ತರು ತೃಪ್ತಿ ಪಡಬೇಕಾಗಿದೆ.ಪರವಾನಿಗೆ ಇಲ್ಲದೇ ಏರ್ಪಡಿಸುವ ಅನ್ನ ಸಂತರ್ಪಣೆ ಕಾರ್ಯಕ್ರಮಗಳ ಮೇಲೆ.ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿರಿಸಿದ್ದಾರೆ…