ಯಕ್ಷಗಾನಕ್ಕೂ ತಟ್ಟಿದ ಎಲೆಕ್ಷನ್ ಬಿಸಿ- ಇನ್ನೆರಡು ತಿಂಗಳುಕಾಲ ಚಂಡೆನಾದವಿಲ್ಲ!

Code of Conduct: impacted cultural programs such as drama, yakshagana, musical sculpture etc.
Code of Conduct: impacted cultural programs such as drama, yakshagana, musical sculpture etc.

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕೋಡ್ ಆಫ್ ಕಂಡಕ್ಟ್​ ಜಾರಿಯಾಗಿದೆ. ಚುನಾವಣಾ ನೀತಿ ಸಂಹಿತೆ ಕೇವಲ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಅಷ್ಟೆ ಸೀಮಿತವಾಗಿಲ್ಲ.

ಬದಲಾಗಿ ಕೋಡ್​ ಆಫ್​ ಕಂಡಕ್ಟ್​ ಬಿಸಿ ಕಲಾವಿದರಿಗೂ ತಟ್ಟಿದ್ದು, ನಾಟಕ, ಯಕ್ಷಗಾನ, ಸಂಗೀತ ರಸಮಂಜರಿ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಾಗದೇ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ನೀತಿಸಂಹಿತೆ ನಿಯಮಾವಳಿಯಿಂದಾಗಿ ಕರಾವಳಿ ಜಿಲ್ಲೆಗಳ ಯಕ್ಷಗಾನ ಸಂಘಟಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಇನ್ಮುಂದೆ ರಾತ್ರಿ 11ರ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.
ಇದರಿಂದ ಈ ಎರಡು ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನಗಳು ರದ್ದಾಗಿವೆ. ರಂಗಮಂದಿರ ಹೊರೆತುಪಡಿಸಿದರೇ ಉಳಿದ ಕಡೆಗಳಲ್ಲಿ ಬಯಲಲ್ಲಿ ಯಕ್ಷಗಾನಗಳು ಮಧ್ಯರಾತ್ರಿ ವೇಳೆ ನಡೆಯುತ್ತವೆ. ಆದ್ರೆ ಚುನಾವಣಾಧಿಕಾರಿಗಳ ಸೂಚನೆಯಿಂದ ಚುನಾವಣೆ ಮುಗಿಯುವರೆಗೂ ಯಕ್ಷಗಾನ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾವಿರಾರು ಯಕ್ಷಗಾನ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು ಯಕ್ಷಗಾನವನ್ನೇ ನಂಬಿರುವ ಕಲಾವಿದರು ಇದರಿಂದ ನಿರುದ್ಯೋಗಿಗಳಾಗಿದ್ದು, ಕಂಗಾಲಾಗಿದ್ದಾರೆ.