ರಾಹುಲ್ ಗಾಂಧಿಯೇ ಕಾಂಗ್ರೆಸ್ ಸುಪ್ರಿಂ ! ಡಿಸೆಂಬರ್ ನಲ್ಲೇ ಪಟ್ಟಾಭಿಷೇಕ !!

ಯುವನಾಯಕ ರಾಹುಲ್​​ ಗಾಂಧಿಗೆ ಎಐಸಿಸಿ ಪಟ್ಟ ಕಟ್ಟೋ ಮುಹೂರ್ತ ಫಿಕ್ಸ್ ಆಗಿದೆ. ದೆಹಲಿಯಲ್ಲಿರುವ ಸೋನಿಯಾ ಗಾಂಧಿ ಅವ್ರ ಟೆನ್ ಜನಪತ್​​​ ನಿವಾಸದಲ್ಲಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್​ಸಿಂಗ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್​, ರಾಹುಲ್​​ ಗಾಂಧಿ ಮತ್ತಿತರರು ಹಾಜರಿದ್ದರು.

ಗುಜರಾತ್​​ ಚುನಾವಣೆಗೂ ಮುನ್ನ ಡಿಸೆಂಬರ್​​ ಒಂದರೊಳಗೆ ರಾಹುಲ್​ಗೆ ಪಟ್ಟ ಕಟ್ಟುವ ಸಾಧ್ಯತೆ ಇದೆ. ಡಿಸೆಂಬರ್​​ 1ರ ಒಳಗೆ ಪಕ್ಷದ ಸಾಂಸ್ಥಿಕ ಚುನಾವಣೆಗಳನ್ನು ಮುಗಿಸಿ ಆನಂತ್ರ ಅಧ್ಯಕ್ಷರ ಆಯ್ಕೆ ಮಾಡಬೇಕಿದೆ. ಒಂದು ವೇಳೆ ರಾಹುಲ್ ಈ ಪಟ್ಟ ಅಲಂಕರಿಸಿದ್ರೆ ನೆಹರು ಕುಟುಂಬದ ಐದನೇ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. 1998ರಿಂದ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷೆಯಾಗಿದ್ದಾರೆ. ಇದಕ್ಕೂ ಮುನ್ನ ಜವಾಹರ್​ಲಾಲ್​ ನೆಹರು,ಇಂದಿರಾಗಾಂಧಿ ಮತ್ತು ರಾಜೀವ್​​ ಗಾಂಧಿ ಎಐಸಿಸಿಯನ್ನು ಮುನ್ನಡೆಸಿದ್ರು.