ಮೋದಿ ಸೋಲಿಸಲು ಮಹಾಮೈತ್ರಿಗೆ ಮುಂದಾಗಿದ್ಯಾ ಕಾಂಗ್ರೆಸ್​​- ಜೆಡಿಎಸ್​,ಬಿಎಸ್​ಪಿ ಜೊತೆ ಕೈಜೋಡಿಸ್ತಾರಾ ಸೋನಿಯಾ?

Congress v/s BJP: Sonia Gandhi's plan to Beat Modi.
Congress v/s BJP: Sonia Gandhi's plan to Beat Modi.

ರಾಜ್ಯ ಕಾಂಗ್ರೆಸ್​ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್​ ನಿರ್ಮೂಲನೆಯೇ ನಮ್ಮ ಗುರಿ ಎಂದು ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಮಣಿಸಲು ಕಾಂಗ್ರೆಸ್​ ಹೈಕಮಾಂಡ್​​ ಸೋನಿಯಾ ಮೇಡ್​ಂ ಸಖತ್​ ರಣತಂತ್ರ ರೂಪಿಸಿದ್ದಾರೆ.

ಹೌದು ಶತ್ರುವಿನ ಶತ್ರು ಮಿತ್ರ ಎಂಬ ಮಾತಿನಂತೆ ಚುನಾವಣೆಗೆ ಸಜ್ಜಾಗುತ್ತಿರುವ ಸೋನಿಯಾಗಾಂಧಿ ನಮೋ ವಿರೋಧಿಗಳ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ರಣಕಹಳೆ ಮೂಡಿಸಲು ಮುಂಧಾಗಿದ್ದಾರೆ.  ಹೌದು ಕಾಂಗ್ರೆಸ್​ ಅಧಿನಾಯಕಿ ಸೋನಿಯಾಗಾಂಧಿ ನಮೋ ಮಣಿಸಲು ಸಿದ್ಧವಾಗುತ್ತಿದ್ದಾರೆ. ಇದಕ್ಕಾಗಿ ಅವರು, ಕರ್ನಾಟಕದಲ್ಲಿ ಜೆಡಿಎಸ್​ ಸೇರಿದಂತೆ ಬಿಎಸ್​ಪಿ,ಸಿಪಿಎಂ ಜೊತೆ ಚುನಾವಣಾ ಪೂರ್ವ ರಾಜಕೀಯ ಒಪ್ಪಂದಕ್ಕೆ ಸೋನಿಯಾ ನಿರ್ಧರಿಸಿದ್ದಾರೆ.

 

ಸದ್ಯದಲ್ಲೇ ಹೆಚ್​.ಡಿ.ದೇವೇಗೌಡ, ಮಾಯಾವತಿ ಜತೆ ಚರ್ಚೆ ನಡೆಸಲು ಸೋನಿಯಾ ಗಾಂಧಿ ನಿರ್ಧರಿಸಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಕಾರ್ಯತಂತ್ರ ಸಿದ್ಧವಾಗುತ್ತಿದೆ.
ಇನ್ನು ಕರ್ನಾಟಕದ ಚುನಾವಣಾ ಪೂರ್ವ ಸರ್ವೇಗಳು ಮೈತ್ರಿಯ ಮುನ್ಸೂಚನೆ ನೀಡಿದ್ದು, ಇತರ ಪಕ್ಷಗಳು ಒಂದಾಗದಿದ್ದರೇ ಬಿಜೆಪಿ ಲಾಭವೆಂದು ಸಮೀಕ್ಷೆಗಳು ಭವಿಷ್ಯ ನುಡಿದಿರೋದರಿಂದ ಹೆದರಿರುವ ಕಾಂಗ್ರೆಸ್​ ಮೈತ್ರಿ ರಾಜಕಾರಣದ ಕುರಿತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಈಗಾಗಲೇ ಸೀಟ್​ ಶೇರಿಂಗ್ ಚರ್ಚೆ ನಡೆದಿದ್ದು, ​​ ಕಾಂಗ್ರೆಸ್​ಗೆ 140 ಸ್ಥಾನ, ಉಳಿದ ಪಕ್ಷಗಳಿಗೆ 84 ಸ್ಥಾನ ನೀಡಲು ಪ್ಲಾನ್​​​ ಮಾಡಲಾಗಿದೆ. ಇನ್ನು ಈ ಮೈತ್ರಿಗೆ ಸಿಎಂ ಸಿದ್ದು ಒಪ್ಪಿಗೆ ಸೂಚಿಸಿಲ್ಲವಾದರೂ ಅವರ ಮನವೊಲಿಸುವ ಪ್ರಯತ್ನ ನಡೆದಿದ್ದು, ಅಧಿವೇಶನದ ನಂತರ ಈ ಬಗ್ಗೆ ಚರ್ಚಿಸಲು ಸೋನಿಯಾ ಸಿಎಂ ಸಿದ್ದು ಹಾಗೂ ಪರಮೇಶ್ವರ್​ಗೆ ಬುಲಾವ್ ನೀಡಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ, ಆಂಧ್ರ,ತಮಿಳುನಾಡು,ಪಶ್ಚಿಮ ಬಂಗಾಳದಲ್ಲೂ ಮಹಾ ಮೈತ್ರಿಗೆ ತಂತ್ರ ನಡೆಸಿದೆ ಎನ್ನಲಾಗಿದೆ.