ಸಂಜೆ ಬರಲಿದೆ ಕೈ ಮೊದಲ ಪಟ್ಟಿ- ದೆಹಲಿಯತ್ತ ರಾಜ್ಯ ನಾಯಕರು!

ರಾಜ್ಯ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆಮಾಡಿದ್ದು, ಪಕ್ಷದಲ್ಲೇ ಅಸಮಧಾನ ಹೊಗೆಯಾಡತೊಡಗಿದೆ. ಇದರ ಬೆನಲ್ಲೇ ಇದೀಗ ಕಾಂಗ್ರೆಸ್​ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ನಡೆದಿದ್ದು, ಬಹುತೇಕ ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾಂಗ್ರೆಸ್ ನಾಯಕರು ಸರ್ಕಸ್​ ನಡೆಸಿದ್ದರೇ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿದೆ.

ad


ಹೌದು ಕಾಂಗ್ರೆಸ್ ಮೊದಲ ಪಟ್ಟಿ ಇಂದು ಸಂಜೆ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಸಂಭಾವ್ಯ ನಾಯಕರ ಪಟ್ಟಿ ದೆಹಲಿ ತಲುಪಿದ್ದು, ಮಧುಸೂದನ್ ಮಿಸ್ತ್ರಿ ನೇತೃತ್ವದ ಸ್ಕ್ರಿನಿಂಗ್ ಕಮಿಟಿ ಚರ್ಚೆ ನಡೆಸಿ ಮೊದಲ ಪಟ್ಟಿಗೆ ಹೈಕಮಾಂಡ್ ಗ್ರೀನ್​ ಸಿಗ್ನಲ್ ಪಡೆದು ಬಿಡುಗಡೆ ಮಾಡಲಿದೆ. ಇನ್ನು ರಾಜ್ಯದ ಪ್ರಮುಖ ನಾಯಕರಾದ ಸಿಎಂ ಸಿದ್ದು,ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​​​, ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್​ ಸೇರಿದಂತೆ ಪ್ರಮುಖರು ಇಂದು ಸಂಜೆ ದಿಲ್ಲಿಗೆ ತೆರಳಲಿದ್ದಾರೆ.

ಹೀಗಾಗಿ ಮಧುಸೂದನ್ ಮಿಸ್ತ್ರಿ ರಾಜ್ಯ ಪ್ರಮುಖರ ಜತೆ ಮತ್ತೊಂದು ಸುತ್ತಿನ ಚರ್ಚೆ ನಂತರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡೋ ಸಾಧ್ಯತೆ ಇದೆ.ಕಾಂಗ್ರೆಸ್​ನಲ್ಲಿ ಸಾಕಷ್ಟು ನಾಯಕರು ತಮ್ಮೊಂದಿಗೆ ತಮ್ಮ ಮಕ್ಕಳಿಗೂ ಟಿಕೇಟ್​ ನೀರಿಕ್ಷಿಸುತ್ತಿದ್ದಾರೆ. ಅಲ್ಲದೇ ಹಲವೆಡೆ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವೆ ಟಿಕೆಟ್​ ಗಾಗಿ ಫೈಟ್​ ಇದೆ. ಹೀಗಾಗಿ ಸಹಜವಾಗಿಯೇ ಮೊದಲ ಪಟ್ಟಿ ಬಿಡುಗಡೆ ಬಳಿಕ ಸಾಕಷ್ಟು ಅಸಮಧಾನವಾಗುವ ಸಾಧ್ಯತೆ ಇದೆ.