ಮಠ-ಮಾನ್ಯಗಳ ನಿಯಂತ್ರಣಕ್ಕೆ ಮುಂಧಾದ ಸರ್ಕಾರ- ಬಿಜೆಪಿಯಿಂದ ತೀವ್ರ ಟೀಕೆ- ಇದು ಹಿಂದುವಿರೋಧಿ ಸರ್ಕಾರ ಎಂದ ಪೇಜಾವರಶ್ರೀ

Control on Mutt-Values: CT Ravi & R.Ashok Outrage Against Government

 ಚುನಾವಣೆ ಎದುರಿನಲ್ಲೇ ಸರ್ಕಾರ ಹಿಂದುತ್ವ ವಿರೋಧಿ ಧೋರಣೆ ತಾಳಿದ್ದು, ವಿಧಾನಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ad

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಠ-ಮಾನ್ಯಗಳನ್ನು ವಶಕ್ಕೆ ಪಡೆಯಲು ಚಿಂತನೆ ನಡೆಸಿದ್ದು, ದೇಗುಲ ಮತ್ತು ಮಠಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ನೂರಾರು ಜಾತಿ ಧರ್ಮಗಳಿಗೆ ಸೇರಿದ ಮಠಗಳು ಕಾರ್ಯನಿರ್ವಹಿಸುತ್ತಿವೆ. ಸ್ವತಂತ್ರವಾಗಿರುವ ಇಂತಹ ಮಠಗಳ ಮೇಲೆ ನಿಯಂತ್ರಣಕ್ಕೆ ಸರ್ಕಾರ ಮುಂಧಾಗಿದೆ. ಕೇವಲ ಮಠ-ದೇವಾಲಯಗಳು ಮಾತ್ರವಲ್ಲದೇ, ಮಠದ ನಿಯಂತ್ರಣಕ್ಕೆ ಒಳಪಟ್ಟ ಶಾಲೆ-ಕಾಲೇಜುಗಳನ್ನು ವಶಕ್ಕೆ ಪಡೆಯಲು ಚಿಂತನೆ ನಡೆಸಿದೆ.  ಇನ್ನು ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹಿಂದೂ ಮಠಗಳನ್ನು ಸರ್ಕಾರ ಟಾರ್ಗೆಟ್​ ಮಾಡ್ತಿದೆ.

 

ಹಿಂದೂ, ಜೈನ್​,ಸಿಖ್​,ಬೌದ್ಧ ಮಠಗಳನ್ನು ಟಾರ್ಗೆಟ್​ ಮಾಡ್ತಿರೋದ್ಯಾಕೆ? ಸುತ್ತೋಲೆಯನ್ನು ಸರ್ಕಾರ ತಕ್ಷಣ ವಾಪಸ ಪಡೆಯಬೇಕು ಎಂದರು.
ಅಲ್ಲದೇ ಈ ವಿಚಾರದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಶಾಸಕ ಸಿ.ಟಿ.ರವಿ ರಾಹುಲ್ ಸಾಫ್ಟ್ ಹಿಂದುತ್ವ ಅಂತಾರೆ. ರಾಜ್ಯ ಭೇಟಿ ವೇಳೆ ಮಠಮಾನ್ಯಗಳಿಗೆ ಭೇಟಿ ನೀಡ್ತಿದ್ದಾರೆ. ಹೀಗಿದ್ದರೂ ಮಠಗಳ ಮೇಲೆ ನಿಯಂತ್ರಣವೇಕೆ ಧರ್ಮವನ್ನ ಒಡೆಯುವ ಷಡ್ಯಂತ್ರವೇಕೆ? ಸರ್ಕಾರ ಈ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ರವಿ ಆಗ್ರಹಿಸಿದ್ದಾರೆ.  ಉಡುಪಿಯಲ್ಲಿ ಸರ್ಕಾರದ ಈ ನಿರ್ಧಾರದ ವಿರುದ್ಧ ಮಾತನಾಡಿದ ಪೇಜಾವರಶ್ರೀಗಳು ಇದು ಸರಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ನಾನು ಇದರ ವಿರುದ್ಧ ಹೋರಾಟ ಮಾಡಲ್ಲ, ಜನತೆಗೆ ಬಿಟ್ಟಿದ್ದೇನೆ. ಇದರಿಂದ ಸರಕಾರ ಹಿಂದೂ ವಿರೋಧಿ ಎನ್ನುವುದು ಸ್ಪಷ್ಟಗೊಳಿಸುತ್ತಿದೆ ಎಂದರು. ಒಟ್ಟಿನಲ್ಲಿ ಚುನಾವಣೆ ಎದುರಿನಲ್ಲಿ ಸರ್ಕಾರ ಹಿಂದುವಿರೋಧ ಪಟ್ಟ ಪಡೆದುಕೊಳ್ಳುವಂತ ನಿರ್ಧಾರ ಮಾಡಿರೋದು ಮಾತ್ರ ವಿಪರ್ಯಾಸವೇ ಸರಿ.