ಕೇಂದ್ರ ಸರಕಾರದ ಯೋಜನೆಗಳೆಲ್ಲ ತಮ್ಮದೆಂದ್ರು ಸಿದ್ದರಾಮಯ್ಯನವರು – ಸಿ ಟಿ ರವಿ ಅರೋಪ

ಸುಳ್ಳು ನಮ್ಮಲ್ಲಿ ಇಲ್ಲವಯ್ಯ. ಸುಳ್ಳೇ ನಮ್ಮನೇ ದೇವರು ಎಂದು ದಾಸರು ಸಿಎಂ ಸಿದ್ದಣ್ಣ, ಎಂಎಲ್‍ಎ ದತ್ತಣ್ಣನನ್ನೇ ನೋಡಿ ಹೇಳಿರೋದು ಅಂತ ಸಿ.ಟಿ.ರವಿ ಕಾಂಗ್ರೆಸ್ ಭಾಷಣ ಮಾಡಿದ್ರು. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಪ್ರಕಾಶಪಥ ಎಂದು ಎಲ್‍ಇಡಿ ಬಲ್ಬ್ ನೀಡುವ ಯೋಜನೆಯನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಆದ್ರೆ, ಕಾಂಗ್ರೆಸ್ಸಿಗರು ಆ ಬಲ್ಬ್ ನ ರಮ್ಯಾಳ ಕೈಕೊಟ್ಟು ಹೊಸ ಬೆಳಕು-ಹೊಸ ಬೆಳಕು ಎಂದು ಹೇಳಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ರು, ಇನ್ನು ಕೇಂದ್ರ ಸರ್ಕಾರದ ಯೋಜನೆ ಗಳೆಲ್ಲ ನಮ್ಮ ಯೋಜನೆ, ನಮ್ಮ ಯೋಜನೆ ಎಂದು ಸಿಎಂ ಸಿದ್ದರಾಮಯ್ಯ ಹೇಳ್ತಿದ್ದಾರೆ, ನಮ್ಮನೆ ಮಕ್ಕಳಿಗೆ ನನ್ನ ಮಗ ಎಂದು ಪರಿಚಯ ಮಾಡೋದು ಸರಿ.

 

ಆದ್ರೆ, ದಾರಿಯಲ್ಲಿ ಹೋಗೋ ಮಕ್ಕಳಿಗೆ ನನ್ನ ಮಕ್ಕಳು ಎಂದ್ರೆ ಅವರಪ್ಪ-ಅಮ್ಮ ಹೊಡೆಯುತ್ತಾರೋ ಇಲ್ವೋ ಎಂದು ಸಿಎಂ ವಿರುದ್ಧ ಲೇವಡಿ ಮಾಡಿದ್ರು. ಇಷ್ಟು ದಿನ ಆಕ್ರೋಶಭರಿತರಾಗಿ ಭಾಷಣ ಮಾಡ್ತಿದ್ದ ರವಿ, ಇಂದು ಭಾಷಣ, ಹೇಳಿಕೆಗೆ ತಕ್ಕಂತೆ ನಿಂತ ಜಾಗದಲ್ಲೇ ಮೈ-ಕೈ ಕುಣಿಸುವ ಮೂಲಕ ನೆರೆದಿದ್ದೋರನ್ನ ರಂಜಿಸಿದ್ರು.