ಚಾಣಕ್ಯನ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ತಪಾಸಣೆ…! ಹೇಗಿದೆ ಗೊತ್ತಾ??

Details About Amit shah's Special Flight and Helicopter
Details About Amit shah's Special Flight and Helicopter

ನೀತಿ ಸಂಹಿತೆ ಬಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗೆ ತಟ್ಟಿದೆ. ಹೌದು ಚುನಾವಣಾ ಅಧಿಕಾರಿಗಳು ಅಮಿತ್ ಶಾ ವಿಶೇಷ‌ ವಿಮಾನ ಹಾಗೂ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ್ದಾರೆ…

ad


ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಪ್ರಯಾಣ ಮಾಡಿರೋ‌ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಚುನಾವಣಾ ಸಂಚಾರ ವಿಚಕ್ಷಣಾ ದಳ ಅಧಿಕಾರಿಗಳಾದ ಆರ್ ಎನ್ ಈರೇಗೌಡ. ಹೆಚ್ ಜಿ ಯೋಗಾನಂದ, ಎಸ್ ಎ ಕರಪಾಲಿ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು. ಆದ್ರೆ ಅಮಿತ್ ಶಾ ಬಳಸಿದ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಇನ್ನೂ ಪತ್ತೆಯಾಗಿಲ್ಲಾ ಅಂತಾ ಅಧಿಕಾರಿಗಳು ಸ್ಪಷ್ಟ ಪಡೆಸಿದ್ರು..

ಅಂದಹಾಗೇ ವಾಣಿಜ್ಯ ನಗರಿ ಹುಬ್ಬಳ್ಳಿಗೆ ವಿಶೇಷ ವಿಮಾನದ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಿ ಹಾವೇರಿ ಜಿಲ್ಲೆಯ ಕಾಗಿನೆಲೆಗೆ ಪ್ರಯಾಣ ಬೆಳೆಸಿದ್ರು. ವಿಮಾನ ನಿಲ್ದಾಣದಲ್ಲಿ ಸಂಸದ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರು ಅಮಿತ್ ಶಾ ಅವರನ್ನು ಅದ್ದೂರಿಯಾಗಿ ಭರಮಾಡಿಕೊಂಡ್ರು. ನಂತ್ರ ಅಮಿತ್ ಶಾ ಹಾಗೂ ಸಂಸದ ಪ್ರಲ್ಹಾದ ಜೋಶಿ ಹಾವೇರಿಯ ಕಾಗಿನೆಲೆ ಕಡೇ ಪ್ರಯಾಣ ಬೆಳೆಸಿದ್ರು..

ಮಂಜು ಪತ್ತಾರ -ಹುಬ್ಬಳ್ಳಿ