ಮೊದಲು ನೀವು ಕೊಟ್ಟ ಅನುದಾನಕ್ಕೆ ಲೆಕ್ಕ ಕೊಡಿ-ಪ್ರಧಾನಿಗೆ ಗುಂಡೂರಾವ್ ಸವಾಲು!

Dinesh Gundu Rao Statement Against Amit Shah.

ರಾಜ್ಯಕ್ಕೆ ನೀಡಿರುವ ಅನುದಾನದ ಲೆಕ್ಕ ಕೇಳುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕೆಪಿಸಿಸ ನಾಯಕರು ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೃಷ್ಣಭೈರೇಗೌಡ್​​ ಹಾಗೂ ದಿನೇಶ್​ ಗುಂಡೂರಾವ್​ , ಕೇಂದ್ರ ಸರ್ಕಾರ ನಮಗೆ ದಾನ ನೀಡುತ್ತಿಲ್ಲ. ಅನುದಾನ ನೀಡುವುದು ಸಂವಿಧಾನಾತ್ಮಕ ಹಕ್ಕು ಎಂದು ಕಿಡಿಕಾರಿದ್ದಾರೆ.  ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಅಮಿತ್ ಶಾ ಪದೇ-ಪದೇ ಕೇಂದ್ರದ ಲೆಕ್ಕ ಕೇಳುತ್ತಾರೆ. 3 ಲಕ್ಷ ಕೋಟಿ ಕೋಟಿ ಅನುದಾನ ಕೊಟ್ಟಿದ್ದೇವೆಂದು ಹೇಳುತ್ತಾರೆ. ಶಾ ಒಬ್ಬ ಸುಳ್ಳುಗಾರ ಚಕ್ರವರ್ತಿ ಜನರ ಮುಂದೇ ಸುಳ್ಳಿನ ಗಂಟು ಇಟ್ಟು ಹೋಗಿದ್ದಾರೆ. 3 ಲಕ್ಷ ಕೋಟಿ ಎಲ್ಲಿ ಕೊಟ್ಟಿದ್ದಾರೆ? ಎಂದು ಗುಂಡುರಾವ್ ಪ್ರಶ್ನಿಸಿದ್ದಾರೆ. ೩ ವರ್ಷದಲ್ಲಿ ೯೬.೨೦೪ ಕೋಟಿ ಬರಬೇಕಿತ್ತು. ಆದರೆ ಬಂದಿರುವುದು ೮೬ ಸಾವಿರ ಕೋಟಿ ಮಾತ್ರ.

 

ಇನ್ನು ೧೦,೫೫೩ ಕೋಟಿ ಹಣ ಬಂದಿಲ್ಲ. ನಮಗೆ ಬರಬೇಕಿರುವ ಹಣವೇ ಬಂದಿಲ್ಲ. ನಾವು ಜನರ ಕೆಲಸವನ್ನ ಹೇಗೆ ಮಾಡುವುದು. ಈ ೧೦ ಸಾವಿರ ಕೋಟಿ ಹಣ ಯಾವಾಗ ಕೊಡುತ್ತಾರೆ ಎಂಬುದನ್ನು ನಾಳೆ ಪ್ರಧಾನಿಯವರು ಸ್ಪಷ್ಟ ಪಡಿಸಬೇಕು ಎಂದರು.  ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೈಗೌಡ್​, ಸುಳ್ಳನ್ನೇ ಸತ್ಯಮಾಡಲು ಅಮಿತ್ ಶಾ ಹೊರಟಿದ್ದಾರೆ. ತೆರಿಗೆ ಹಣವನ್ನ ಸಂಗ್ರಹಿಸುವುದು ಕಸ್ಟಮ್ಸ್ . ಇಲ್ಲಿ ರಾಜ್ಯ ಮತ್ತು ಕೇಂದ್ರ ಏಜೆಂಟರಿದ್ದಂತೆದೇಶಕ್ಕೆ ಹೆಚ್ಚಿನ ವರಮಾನ ನಾವು ನೀಡುತ್ತಿದ್ದೇವೆ. ಅದೇ ವರಮಾನ ಇತರ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೂ ಬಳಕೆಯಾಗುತ್ತಿದೆ. ಇದನ್ನ ಮೋದಿ,ಅಮಿತ್ ಶಾ ಅರ್ಥ ಮಾಡಿಕೊಳ್ಳ ಬೇಕು. ೩ ಲಕ್ಷ ಕೋಟಿ ರಾಜ್ಯಕ್ಕೆ ಎಲ್ಲಿಂದ ಕೊಟ್ಟಿದ್ದೀರಾ ಎಂಬುದನ್ನು ನೀವು ನಾಳೆ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ದಾಖಲೆ ಬಿಡುಗಡೆ ಮಾಡಿ ಎಂದು ಕೃಷ್ಣಬೈರೈಗೌಡರು ಪ್ರಧಾನಿಗೆ ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಶಾ ಹೇಳಿಕೆ ಕಾಂಗ್ರೆಸ್ಸಿಗರ ಕೋಪಕ್ಕೆ ಕಾರಣವಾಗಿದ್ದು, ದಿನೇಶ್​ ಗುಂಡೂರಾವ್ ಹಾಗೂ ಕೃಷ್ಣಭೈರೈಗೌಡರು ಸುದ್ದಿಗೋಷ್ಠಿ ನೀಡಿ ಉತ್ತರಿಸಿದ್ದಾರೆ.