ಸಿಎಂ ಸಿದ್ದರಾಮಯ್ಯ ಮತ್ತು ಕುರುಬರ ಮದ್ಯೆ ವಾಗ್ವಾದ !! ಜಾತಿ ರಾಜಕಾರಣದಲ್ಲಿ ಅಪ್ಪಚ್ಚಿಯಾದ ಎಸ್ಪಿ !!

Dispute Between CM Siddaramaiah and Protester at Bagalkot.
Dispute Between CM Siddaramaiah and Protester at Bagalkot.

ಚುನಾವಣೆ ಬರುತ್ತಿದ್ದಂತೆ ಜಾತಿ ರಾಜಕಾರಣ ಗರಿಗೆದರುತ್ತದೆ. ಸ್ವತಹ ಕುರುಬರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಕುರುಬರು ಮುತ್ತಿಗೆ ಹಾಕಿದ್ರು. ಆದರೆ ಆಕ್ರೋಶಿತ ಸಿಎಂ ಸಿದ್ದರಾಮಯ್ಯ ಅವಾಝ್ ಹಾಕಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ !!

 

ಬಾಗಲಕೋಟೆಯ ನವ ನಗರದ ಹೆಲಿಪ್ಯಾಡ್​ನಲ್ಲಿ ಪ್ರತಿಭಟನಾಕಾರರು ಹಾಗೂ ಸಿಎಂ ನಡುವೆ ವಾಗ್ವಾದ ನಡೆದಿದೆ. ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಬೇಕೆಂದು ಆಗ್ರಹಿಸಿ ಸಂಗೊಳ್ಳಿರಾಯಣ್ಣ ಯುವ ಬ್ರಿಗೇಡ್​ ಕಾರ್ಯಕರ್ತರು ಮನವಿ ಸಲ್ಲಿಸಲು ಬಂದಿದ್ದರು. ಮನವಿ ಸ್ವೀಕರಿಸಲು ಹೋದ ಸಿಎಂ ಸಿದ್ದರಾಮಯ್ಯನವರಿಗೆ ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಿ ಎಂದು ಮನವಿ ಸಲ್ಲಿಸಿದರು.ಆಯ್ತು ನೋಡೋಣ ಅಂತಾ ಸಿಎಂ ಹೇಳಿದ್ರು. ಆದ್ರೆ ಪ್ರತಿಭಟನಾಕಾರರು ಸಿದ್ದರಾಮಯ್ಯನವರಿಗೆ ಇದನ್ನ ಮಾಡಲೇ ಬೇಕು ಎಂದು ವಾದ ಮಾಡತೊಡಗಿದರು. ಇದರಿಂದ ಕೋಪಗೊಂಡ ಸಿಎಂ ಸಿದ್ದರಾಮಯ್ಯ, “ಇದೆಲ್ಲ ಕೇಂದ್ರ ಸರ್ಕಾರಕ್ಕೆ ಬರುತ್ತೆ. ನೋಡೋಣ” ಎಂದ್ರು.

ಇದು ಮನವಿ ಸಲ್ಲಿಸಲು ಬಂದಿದ್ದವರು ಹಾಗೂ ಸಿಎಂ ನಡುವೆ ವಾಗ್ವಾದಕ್ಕೆ ಕಾರಣವಾಯ್ತು. ಇದರಿಂದ ಸಿಎಂ ಗರಂ ಆದ್ರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯ್ತು.

 

 

ಪೊಲೀಸರಿಗೆ ಅಡಕತ್ತರಿಯಲ್ಲಿ ಸಿಲುಕಿದ ಸ್ಥಿತಿ. ಪ್ರತಿಭಟನಾಕಾರರು ಕುರುಬರಾಗಿರೋದ್ರಿಂದ ಸಿಎಂ ಸಾಫ್ಟ್ ಕಾರ್ನರ್ ಹೊಂದಿರುತ್ತಾರೆ ಎಂದು ಪೊಲೀಸರು ಸುಮ್ಮನಿದ್ದರು. ಲಾಠಿ ಚಾರ್ಜ್ ಮಾಡಿದ್ರೆ, ತಳ್ಳಾಡಿದ್ರೆ ಕುರುಬ ಸಮುದಾಯದಿಂದ ಬಂದ ಮುಖ್ಯಮಂತ್ರಿ ಕುರುಬರ ಮೇಲೆ ಲಾಠಿಚಾರ್ಜ್ ಮಾಡಿಸಿದ್ರು ಅಂತ ಗುಲ್ಲೆಬ್ಬಿಸಬಹುದು ಅಂತ ಪೊಲೀಸರು ಸುಮ್ಮನಿದ್ದರು.

ಕೊನೆಗೆ ದಾರಿ ಕಾಣದೆ ಪೊಲೀಸರು ಮದ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಸಿಎಂ ಕಾರು ಹತ್ತಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಬಾಲಗಕೋಟೆ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತರನ್ನ ಕರೆದು ಮೊದಲು ಅವರನ್ನು ಹೊರಕರೆದುಕೊಂಡು ಹೋಗು ಏನ್ ಮಾಡ್ತಾ ಇದ್ದೀಯಾ ಎಂದು ತರಾಟೆಗೆ ತೆಗೆದುಕೊಂಡರು.