ಡಿಕೆಶಿ ಮುಂದಿನ ಸಿಎಂ ಆಗಲಿ- ಮೈಲಾರಲಿಂಗೇಶ್ವರ್ ಜಾತ್ರೆಯಲ್ಲಿ ಗೊರವಪ್ಪ ಕಾರ್ಣಿಕ!

DK Shivakumar Reacts On Media At Mailarlingeshwar Temple.

 ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ದಿನಗಣನೆ ನಡೆದಿದೆ.

ಅಧಿಕಾರದ ನೀರಿಕ್ಷೆಯಲ್ಲಿರುವ ಬಿಜೆಪಿ ಹಾಗೂ ಅಧಿಕಾರದ ಗದ್ದುಗೆಯನ್ನು ಮುಂದುವರೆಸಿಕೊಂಡು ಹೋಗುವ ಕನಸಿನಲ್ಲಿರುವ ಕಾಂಗ್ರೆಸ್​​ನಲ್ಲಿ ಈಗಾಗಲೇ ನಾಯಕತ್ವದ ಚರ್ಚೆ ಆರಂಭವಾಗಿದೆ.
ಹೀಗಿರುವಾಗಲೇ ಪವರ್​​ ಮಿನಿಸ್ಟರ್​​​ ಡಿಕೆ ಶಿವಕುಮಾರ್​ ಸಿಎಂ ಆಗಲಿ ಎಂಬ ಆರ್ಶಿವಾದವೊಂದು ಲಭ್ಯವಾಗಿದೆ. ಹೌದು ಬಳ್ಳಾರಿಯ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಡಿಕೆಶಿ ರಾಜ್ಯದ ಸಿಎಂ ಆಗಲಿ ಎಂದು ಮೈಲಾರಲಿಂಗೇಶ್ವರ ದೇಗುಲದ ಧರ್ಮದರ್ಶಿ ವೆಂಕಪ್ಪ ಒಡೆಯರ್​​​ ಹರಸಿದ್ದಾರೆ.

 

 

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಪ್ರತಿವರ್ಷ ನಡೆಯೋ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಪ್ಪ ಕಾರ್ಣಿಕ ನುಡಿಯಿತು. ಇದ್ರಲ್ಲಿ ಡಿ.ಕೆ.ಶಿವಕುಮಾರ್​ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಇದೇ ವೇಳೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ‌ ಬಿಲ್ಲನ್ನೇರಿ ಗೊರವಪ್ಪ ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್ ಎಂದು ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯಿತು. ಈ ಕಾರ್ಣಿಕದ ಆಧಾರದ‌ ಮೇಲೆಯೇ ವರ್ಷದ ಮಳೆ ‌ಬೆಳೆ ಚೆನ್ನಾಗಿರುತ್ತೆ ಎನ್ನಲಾಗಿದ್ದು, ರಾಜಕಾರಣಕ್ಕೂ ಹೋಲಿಕೆ ಮಾಡಿ ಕಾರ್ಣಿಕ ವಿಶ್ಲೇಷಣೆ ಮಾಡಿರುವ ಜನರು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ತರಲು ಪರದಾಡುತ್ತಾರೆ. ಪ್ರಮುಖ ನಾಯಕರಿಗೆ ಗಂಡಾಂತರ ಕಾದಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಕಾರ್ಣಿಕವನ್ನು ಅರ್ಥೈಸಿದ ಮೈಲಾರಲಿಂಗೇಶ್ವರ್ ಅರ್ಚಕರು ಡಿಕೇಶಿ ಸಿಎಂ ಆಗಲಿ ಎಂದಿದ್ದಾರೆ.